Asianet Suvarna News Asianet Suvarna News

ಚಿತ್ರದುರ್ಗದಲ್ಲಿವೆ 50ಕ್ಕೂ ಹೆಚ್ಚು ಕಲ್ಲಿನ ಕ್ವಾರಿಗಳು: ಜನರ ಜೀವಕ್ಕೆ ಬೆಲೆನೇ ಇಲ್ವಾ?

ಚಿತ್ರದುರ್ಗ ಜಿಲ್ಲೆಯಲ್ಲಿಯೂ ಇವೆ 50ಕ್ಕೂ ಹೆಚ್ಚು ಕಲ್ಲಿನ ಕ್ವಾರಿಗಳಿವೆ| ಏಷ್ಯಾನೆಟ್‌ ಸುವರ್ಣ ನ್ಯೂಸ್‌ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಎಲ್ಲವೂ ಬಯಲು| ಸ್ಫೋಟದಿಂದ ಮನೆಗಳ ಮೇಲೆ ಬೀಳುತ್ತಿರುವ ಕಲ್ಲಿನ ಚೂರುಗಳು| ಮಕ್ಕಳು ಬಾಣಂತಿಯರು ಮನೆಯಲ್ಲಿ ಇರೋದೇ ಕಷ್ಟ| 

First Published Jan 23, 2021, 3:30 PM IST | Last Updated Jan 23, 2021, 3:30 PM IST

ಚಿತ್ರದುರ್ಗ(ಜ.23): ಜಿಲ್ಲೆಯಲ್ಲಿಯೂ ಕೂಡ 50ಕ್ಕೂ ಹೆಚ್ಚು ಕಲ್ಲಿನ ಕ್ವಾರಿಗಳಿವೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಎಲ್ಲವೂ ಬಯಲಾಗಿದೆ. ಸಂಜೆ 6 ಗಂಟೆಗೆ ಕಲ್ಲು ಕ್ವಾರಿಗಳಲ್ಲಿ ಬ್ಲಾಸ್ಟಿಂಗ್‌ ಸ್ಟಾರ್ಟ್‌ ಅಗುತ್ತದೆ. ಇದರಿಂದ ಇಲ್ಲಿನ ಜನರು ಮನೆ ಬಿಟ್ಟು ಹೊರಗಡೆ ಬರೋದಕ್ಕೂ ಭಯವಾಗುತ್ತಿದೆ.

ವಿಜಯಪುರದಲ್ಲಿ ಕಲ್ಲು ಗಣಿಗಾರಿಕೆಗಳ ಅಬ್ಬರ: ಭಯಾನಕನ ಸ್ಫೋಟಕ್ಕೆ ಬೆಚ್ಚಿಬಿದ್ದ ಜನ..!

ಸ್ಫೋಟದಿಂದ ಕಲ್ಲಿನ ಚೂರುಗಳು ಮನೆಗಳ ಮೇಲೆ ಬೀಳುತ್ತಿವೆ. ಮಕ್ಕಳು ಬಾಣಂತಿಯರು ಮನೆಯಲ್ಲಿ ಇರೋದೇ ಕಷ್ಟವಾಗಿದೆ. ಕಷ್ಟ ಹೇಳಿದ್ರೂ ಅಧಿಕಾರಿಗಳು ಮಾತ್ರ ಕ್ಯಾರೇ ಅನ್ನುತ್ತಿಲ್ಲ.  
 

Video Top Stories