ಚಿಕ್ಕಮಗಳೂರು ಜಿಲ್ಲೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸೋಂಕಿತ ಯುವಕ ಬಲಿ..!
ಕಳೆದ ಎರಡು ತಿಂಗಳ ಹಿಂದಷ್ಟೇ ಯುವಕ ಮದುವೆಯಾಗಿದ್ದ. ರಾತ್ರಿ ಆಂಬ್ಯುಲೆನ್ಸ್‌ಗೆ ಕರೆ ಮಾಡಿದರೆ, ಮರುದಿನ ಮಧ್ಯಾಹ್ನ ಆಂಬ್ಯಲೆನ್ಸ್ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಲಿಂಗದಹಳ್ಳಿಯ 32 ವರ್ಷದ ಯುವಕ ಕೊರೋನಾದಿಂದ ಕೊನೆಯುಸಿರೆಳೆದಿದ್ದಾನೆ.
ಚಿಕ್ಕಮಗಳೂರು(ಜು.27): ಕೊರೋನಾ ಅವಾಂತರಕ್ಕೆ ಕೊನೆಯೇ ಇಲ್ವಾ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗತೊಡಗಿದೆ. ದಿನಕ್ಕೊಂದು ಜಿಲ್ಲೆಯಲ್ಲಿ ಯಡವಟ್ಟುಗಳ ದರ್ಶನವಾಗುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಚಿಕ್ಕಮಗಳೂರಿನಲ್ಲಿ ಯುವಕನೊಬ್ಬನ ಜೀವ ಬಲಿಯಾಗಿದೆ.
ಕಳೆದ ಎರಡು ತಿಂಗಳ ಹಿಂದಷ್ಟೇ ಯುವಕ ಮದುವೆಯಾಗಿದ್ದ. ರಾತ್ರಿ ಆಂಬ್ಯುಲೆನ್ಸ್‌ಗೆ ಕರೆ ಮಾಡಿದರೆ, ಮರುದಿನ ಮಧ್ಯಾಹ್ನ ಆಂಬ್ಯಲೆನ್ಸ್ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಲಿಂಗದಹಳ್ಳಿಯ 32 ವರ್ಷದ ಯುವಕ ಕೊರೋನಾದಿಂದ ಕೊನೆಯುಸಿರೆಳೆದಿದ್ದಾನೆ.
ಅವಳಿ ಮಕ್ಕಳ ಜೊತೆ ತಾಯಿ ನರಕ ಯಾತನೆ; ಸುವರ್ಣ ನ್ಯೂಸ್ ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು
ವಾರದ ಹಿಂದೆಯೇ ಸ್ವಾಬ್ ಕಲೆಕ್ಟ್ ಮಾಡಲಾಗಿತ್ತು ಆದರೆ ವರದಿ ಬಂದಿರಲಿಲ್ಲ. ವರದಿ ಬೇಗ ಬಂದಿದ್ದರೆ ಯುವಕ ಬದುಕುಳಿಯುವ ಸಾಧ್ಯತೆಯಿತ್ತು. ಆರೋಗ್ಯ ಇಲಾಖೆ ಹಾಗೂ ಸರ್ಕಾರದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.