ಕೊರೋನಾ ಹಾಟ್‌ಸ್ಪಾಟ್ ಚಿಕ್ಕಬಳ್ಳಾಪುರ ತಹಸೀಲ್ದಾರ್‌ಗೆ ಏಸಿ ಬೇಕಂತೆ..!

ಆರೋಗ್ಯ ತುರ್ತು ಪರಿಸ್ಥಿತಿ ಇದ್ದರೂ ಗೌರಿಬಿದನೂರು ತಹಸೀಲ್ದಾರ್ ಅವರಿಗೆ ಎಸಿ ಬೇಕಂತೆ. ರಜೆ ಕೇಳಿದ ಸಿಬ್ಬಂದಿಗೆ ಹೊಸದಾಗಿ ಮಾಡಿದ ತನ್ನ ಮನೆಗೆ ಎಸಿ ಬೇಕೆಂದು ತಹಸೀಲ್ದಾರ್ ಬೇಡಿಕೆ ಇಟ್ಟ ಘಟನೆ ನಡೆದಿದೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್. ಏನು ಕೇಳಿದ್ದಾರೆ ಈ ಮಹಾನ್ ತಹಸೀಲ್ದಾರ್, ನೀವೇ ನೋಡಿ

First Published Apr 22, 2020, 4:41 PM IST | Last Updated Apr 22, 2020, 4:44 PM IST

ಚಿಕ್ಕಬಳ್ಳಾಪುರ(ಏ.22): ಆರೋಗ್ಯ ತುರ್ತು ಪರಿಸ್ಥಿತಿ ಇದ್ದರೂ ಗೌರಿಬಿದನೂರು ತಹಸೀಲ್ದಾರ್ ಅವರಿಗೆ ಎಸಿ ಬೇಕಂತೆ. ರಜೆ ಕೇಳಿದ ಸಿಬ್ಬಂದಿಗೆ ಹೊಸದಾಗಿ ಮಾಡಿದ ತನ್ನ ಮನೆಗೆ ಎಸಿ ಬೇಕೆಂದು ತಹಸೀಲ್ದಾರ್ ಬೇಡಿಕೆ ಇಟ್ಟ ಘಟನೆ ನಡೆದಿದೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್. ಇದು ಕೊರೋನಾ ಹಾಟ್‌ಸ್ಪಾಟ್‌ ಚಿಕ್ಕಬಳ್ಳಾಪುರದ ಕಥೆ.

ಇಡೀ ದೇಶವೇ ಲಾಕ್‌ಡೌನ್ ಆಗಿದ್ರೂ ಈತನಿಗೆ ಮಾತ್ರ ಎಸಿಯಲ್ಲಿ ಕೂಲ್ ಆಗಿರಬೇಕು ಎನ್ನುವುದೇ ಚಿಂತೆ. ಹೆಲ್ತ್‌ ಎಮರ್ಜೆನ್ಸಿ ಇದ್ದರೂ ತಹಸೀಲ್ದಾರ್‌ಗೆ ಮಾತ್ರ ಎಸಿ ಬೇಕು. ತನ್ನ ಕಚೇರಿ ಸಿಬ್ಬಂದಿಗೆ ತಹಸೀಲ್ದಾರ್ ರಾಜಣ್ಣ ಆಮಿಷ ಕೊಟ್ಟಿದ್ದು, ರಜೆ ಬೇಕಾದ್ರೆ ಮನೆಗೆ ಏಸಿ ಹಾಕಿಸಿಕೊಡಿ ಎಂದು ಕೇಳಿದ್ದಾರೆ.

ಕೆಲ‌ ಮಂತ್ರಿಗಳಿಗೆ ಕಂಟಕ‌: ಕರ್ನಾಟಕದ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ...!

ಏಸಿ ಹಾಕ್ಕೊಟ್ರೆ ಬೇಕಾದಷ್ಟು ದಿನ ರಜೆ ಕೊಡೋದಾಗಿ ತಹಸೀಲ್ದಾರ್ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ದೇಶದಲ್ಲಿ ಹೆಲ್ತ್‌ ಎಮರ್ಜೆನ್ಸಿ ಇರುವಾಗ ಎಸಿ ಬೇಕು ಎಂದು ಬೇಡಿಕೆ ಇಟ್ಟಿರೋ ತಹಸೀಲ್ದಾರ್ ಬಗ್ಗೆ ಟೀಕೆ ವ್ಯಕ್ತವಾಗಿದೆ.