Chamarajanagar: ವಸತಿ ಗೃಹದಿಂದ ಕುಟುಂಬ ಹೊರಹಾಕಿದ ಪ್ರಕರಣ: ಆರು ದಿನಗಳಿಂದ ಬೀದಿಯಲ್ಲೇ ವಾಸ

ಜಿಲ್ಲೆಯ ಇತಿಹಾಸ ಪ್ರಸಿದ್ದ ಮಹದೇಶ್ವರ ಬೆಟ್ಟದಲ್ಲಿ ವಸತಿ ಗೃಹದಿಂದ ಕುಟುಂಬವೊಂದನ್ನು ಹೊರಹಾಕಿದ ಪ್ರಕರಣದಲ್ಲಿ ಕಳೆದ ಆರು ದಿನಗಳಿಂದ ನಿರಾಶ್ರಿತರಾಗಿ ಬೀದಿಯಲ್ಲೇ ವಿಧವೆ ಹಾಗೂ ಆಕೆಯ ಮಕ್ಕಳು ವಾಸ ಮಾಡುತ್ತಿದ್ದಾರೆ. 

First Published Jan 20, 2022, 10:52 PM IST | Last Updated Jan 20, 2022, 10:56 PM IST

ಚಾಮರಾಜನಗರ (ಜ.20): ಜಿಲ್ಲೆಯ ಇತಿಹಾಸ ಪ್ರಸಿದ್ದ ಮಹದೇಶ್ವರ ಬೆಟ್ಟದಲ್ಲಿ ವಸತಿ ಗೃಹದಿಂದ ಕುಟುಂಬವೊಂದನ್ನು ಹೊರಹಾಕಿದ ಪ್ರಕರಣದಲ್ಲಿ ಕಳೆದ ಆರು ದಿನಗಳಿಂದ ನಿರಾಶ್ರಿತರಾಗಿ ಬೀದಿಯಲ್ಲೇ ವಿಧವೆ ಹಾಗೂ ಆಕೆಯ ಮಕ್ಕಳು ವಾಸ ಮಾಡುತ್ತಿದ್ದಾರೆ. ಅವಧಿ ಮೀರಿ ವಾಸ್ತವ್ಯ ಆರೋಪದ ಹಿನ್ನಲೆಯಲ್ಲಿ ಮೃತನೌಕರನ ಕುಟುಂಬವನ್ನು ಜ.14 ರಂದು ವಸತಿಗೃಹದಿಂದ ಪ್ರಾಧಿಕಾರ ಹೊರಹಾಕಿದೆ. 3 ವರ್ಷಗಳ ಹಿಂದೆ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದ ಪ್ರಾಧಿಕಾರದ ಖಾಯಂ ನೌಕರ ಜಯಸ್ವಾಮಿ. ಮೃತ ನೌಕರನ ಕುಟುಂಬಕ್ಕೆ ಅನುಕಂಪ ಆಧಾರದ ಮೇಲೆ ನೌಕರಿ ಹಾಗೂ ಮರಣಾ ನಂತರದ ಸೌಲಭ್ಯಗಳನ್ನು ಪ್ರಾಧಿಕಾರ ನೀಡಿಲ್ಲ. 

Covid ನಿಯಮ ಉಲ್ಲಂಘಿಸಿ ಹುಟ್ಟುಹಬ್ಬ ಆಚರಣೆ, ಬಿಜೆಪಿ ಶಾಸಕನ ವಿರುದ್ಧ FIR ದಾಖಲು!

ಹಾಗಾಗಿ ಅನುಕಂಪ ಆಧಾರದ ನೌಕರಿ ಮತ್ತು ಮರಣಾ ನಂತರದ ಕ್ಲೇಮುಗಳನ್ನು ನೀಡುವಂತೆ ಆಗ್ರಹಿಸಿ ವಸತಿ ಗೃಹದಲ್ಲೇ ಮೃತ ನೌಕರನ ಪತ್ನಿ-ಮಗ ಉಳಿದಿದ್ದಾರೆ. ನಮಗೆ ಬೇರೆ ಯಾವುದೇ ಮನೆ ಇಲ್ಲ, ಉದ್ಯೋಗವೂ ಇಲ್ಲ, ಮರಣಾನಂತರ ಬರಬೇಕಾಗಿದ್ದ ಹಣ ನೀಡಿದ್ದರೆ ನಾವು ಬೇರೆ ಬಾಡಿಗೆ ಮನೆಗೆ ಹೋಗುತ್ತಿದ್ದವು. ಅನಿವಾರ್ಯವಾಗಿ ವಸತಿ ಗೃಹದಲ್ಲೇ ಉಳಿಯಬೇಕಾಯಿತು ಎಂದು ಮೃತನೌಕರನ ಕುಟುಂಬದವರು ಅಳಲು ತೋಡಿಕೊಂಡಿದ್ದಾರೆ. ಕೋವಿಡ್,  ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಬಲವಂತವಾಗಿ ಹೊರ ಹಾಕಿದ್ದು ಎಷ್ಟು ಸಮಂಜಸ? ಅಧಿಕಾರಿಗಳಿಗೆ ಮಾನವೀಯತೆಯೇ ಇಲ್ಲವಾ? 30 ವರ್ಷ ಸೇವೆ ಮಾಡಿದ ಮೃತನೌಕರನಿಗೆ ಕೊಡುವ ಗೌರವ ಇದೇನಾ ಎಂದು ನಿರಾಶ್ರಿತ ಕುಟುಂಬದ ಪರ ಕನ್ನಡ ಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.