Covid ನಿಯಮ ಉಲ್ಲಂಘಿಸಿ ಹುಟ್ಟುಹಬ್ಬ ಆಚರಣೆ, ಬಿಜೆಪಿ ಶಾಸಕನ ವಿರುದ್ಧ FIR ದಾಖಲು!

ಬಿಜೆಪಿ ಮುಖಂಡ ಎನ್‌. ಆರ್‌. ರಮೇಶ್ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಕೋವಿಡ್ ನಿಯಮ ಉಲ್ಲಂಘಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಕ್ಕೆ ಈ ಕಂಟಕ ಎದುರಾಗಿದೆ. 

First Published Jan 20, 2022, 5:01 PM IST | Last Updated Jan 20, 2022, 5:01 PM IST

ಬೆಂಗಳೂರು(ಜ.20): ಬಿಜೆಪಿ ಮುಖಂಡ ಎನ್‌. ಆರ್‌. ರಮೇಶ್ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಕೋವಿಡ್ ನಿಯಮ ಉಲ್ಲಂಘಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಕ್ಕೆ ಈ ಕಂಟಕ ಎದುರಾಗಿದೆ. 

ಹೌದು ರಾಜ್ಯಾದ್ಯಂತ ಕೊರೋನಾ ನಿಯಂತ್ರಣ ಸಂಬಂಧ ವೀಕೆಂಡ್ ಕೃfಪ್ಯೂ ವಿಧಿಸಿದ್ದ ಸಂದರ್ಭದಲ್ಲಿ ಶಾಸಕ ರಮೇಶ್ ತಮ್ಮ ಬನಶಂಕರಿಯ ಮನೆ ಬಳಿ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಮನೆ ಬಳಿ ಪೆಂಡಾಲ್ ಹಾಕಿದ್ದು, ಇಲ್ಲಿ ಭಾರೀ ಸಂಖ್ಯೆಯಲ್ಲಿ ಜನ ನೆರೆದಿದ್ದರು. ಆದರೀಗ ಈ ವಿಚಾಋ ಸಂಬಂಧ ಶಾಸಕರ ವಿರುದ್ಧ ಕೇಸ್‌ ದಾಖಲಾಗಿದೆ.