ಸಿಎಂ ಮುಡಾ ಹಗರಣದಲ್ಲಿ ಸಿಲುಕಿದ್ದು, ದಲಿತರಿಗೆ ಮೀಸಲಿಟ್ಟ ಜಾಗ ಕೊಳ್ಳೆ ಹೊಡೆದಿದ್ದಾರೆ: ಬಿವೈ ವಿಜಯೇಂದ್ರ
ಸದನದ ಹೊರಗೂ ಒಳಗೂ ಬಿಜೆಪಿ ಹೋರಾಟ
ಮುಡಾ ಹಗರಣದ ವಿರುದ್ಧ ಬಿಜೆಪಿ ಹೋರಾಟ
ಸಿಎಂ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಿಡಿ
ಮುಡಾ ಹಗರಣವನ್ನು(Muda scam) ಸಿಬಿಐಗೆ ನೀಡಬೇಕು. ಈ ಪ್ರಕರಣದ ವಿರುದ್ಧ ಬಿಜೆಪಿ(BJP) ಸದನದ ಹೊರಗೂ ಒಳಗೂ ಹೋರಾಟ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendr) ಹೇಳಿದ್ದಾರೆ. ನ್ಯಾಯಾಂಗ ತನಿಖೆ ನಾವು ಒಪ್ಪಲ್ಲ. ಸಿಎಂ ಕುಟುಂಬದ ವಿರುದ್ಧ ಆರೋಪ ಕೇಳಿ ಬಂದಿದೆ. ಸಿಬಿಐ(CBI) ಬಿಟ್ಟರೆ ಬೇರೆ ಯಾರೂ ತನಿಖೆ ಮಾಡಬಾರದು. ಸಿಎಂ (Siddaramaiah) ಮುಡಾ ಹಗರಣದಲ್ಲಿ ಸಿಲುಕುತ್ತಾರೆ ಎಂದು ಕೊಂಡಿರಲಿಲ್ಲ. ದಲಿತರಿಗೆ ಮೀಸಲಿಟ್ಟ ಜಾಗ ಕೊಳ್ಳೆ ಹೊಡೆದಿದ್ದಾರೆ. ವಾಲ್ಮೀಕಿ ನಿಗಮದಲ್ಲೂ ಸರ್ಕಾರ ಲೂಟಿ ಮಾಡಿದೆ. ಸರ್ಕಾರ ತಪ್ಪಿಸಿಕೊಳ್ಳುವ ಕೆಲಸ ಮಾಡುತ್ತಿದೆ. ಬೇರೆ ಬೇರೆ ನಿಗಮಗಳಲ್ಲೂ ಹಗರಣಗಳು ನಡೆದಿವೆ. ಕಾಂಗ್ರೆಸ್ ಸರ್ಕಾರ ಬೂಟಾಟಿಕೆ ಮಾಡೊದು ಬೇಡ. ರೈತರ ರಕ್ಷಣೆ ಮಾಡಬೇಕಾದ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಸಿಎಂ ವಿರುದ್ಧ ವಿಜಯೇಂದ್ರ ಕಿಡಿಕಾರಿದರು.
ಇದನ್ನೂ ವೀಕ್ಷಿಸಿ: ಮೋದಿ-ಆರ್‌ಎಸ್‌ಎಸ್ ಸಂಬಂಧ ಹದಗೆಡುತ್ತಿದ್ಯಾ ? RSS ಮೀರಿಸುವ ಮೋದಿ ವ್ಯಕ್ತಿಪೂಜೆ ಬಗ್ಗೆ ಸಂಘಪರಿವಾರಕ್ಕೆ ಆತಂಕ!