ಮೋದಿ-ಆರ್‌ಎಸ್‌ಎಸ್ ಸಂಬಂಧ ಹದಗೆಡುತ್ತಿದ್ಯಾ ? RSS ಮೀರಿಸುವ ಮೋದಿ ವ್ಯಕ್ತಿಪೂಜೆ ಬಗ್ಗೆ ಸಂಘಪರಿವಾರಕ್ಕೆ ಆತಂಕ!
ಮೊದಲ ಅವಧಿಯಲ್ಲಿ RSS -ಮೋದಿ ನಡುವೆ ಉತ್ತಮ ಆತ್ಮೀಯತೆ
ಮೊದಲ ಅವಧಿಯಲ್ಲಿ ಸಂಘದ ಹಿರಿಯರ ಸಲಹೆ ಕೇಳುತ್ತಿದ್ದ ಮೋದಿ
ಸಂಘ ಹೇಳಿದ 10ರಲ್ಲಿ 5 ಕೆಲಸವಾದ್ರೂ ಮಾಡಿಕೊಡುತ್ತಿದ್ದ ಮೋದಿ
ಪ್ರಧಾನಿ ಮೋದಿ (Narendra modi) ಹಾಗೂ ಆರ್‌ಎಸ್‌ಎಸ್ (RSS)ನಡುವೆ ಬಿರುಕು ಮೂಡಿದ್ಯಾ? ಬಿಜೆಪಿಯ (BJP) ಸುಪ್ರೀಂ ಲೀಡರ್ ಹಾಗೂ ಸಂಘಪರಿವಾರದ ಸಂಬಂಧ ಹಾಳಾಗಿದ್ಯಾ ಅನ್ನೋ ಅನುಮಾನ ಮೂಡುತ್ತಿದೆ. ಈ ಚರ್ಚೆ ಹುಟ್ಟಿಕೊಳ್ಳಲು ಕಾರಣ ಇತ್ತೀಚಿನ ದಿನಗಳಲ್ಲಿ ನಡೆದ ಕೆಲ ಘಟನೆಗಳು. ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಲೋಕಸಭೆ ಚುನಾವಣೆಯಲ್ಲಿ(Loksabha eletcion) ಬಿಜೆಪಿಗೆ ಹಿನ್ನಡೆ ಆಗಲು ಕೆಲ ನಾಯಕರ ಅಹಂಕಾರ ಕಾರಣ ಎಂದಿದ್ರು. ಮತ್ತೊಂದೆಡೆ ಜೆಪಿ ನಡ್ಡಾ, ಬಿಜೆಪಿಗೆ ಆರ್‌ಎಸ್ಎಸ್ ಅಗತ್ಯವಿಲ್ಲ ಎಂದಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಬಿಜೆಪಿ-RSS ತಿಕ್ಕಾಟದ ಅನುಮಾನಗಳಿಗೆ ಪುಷ್ಟಿ ನೀಡುತ್ತಿವೆ.
ಇದನ್ನೂ ವೀಕ್ಷಿಸಿ: ಮೂರು ದಿನದ ಯಲಹಂಕ ಸಂಭ್ರಮಕ್ಕೆ ತೆರೆ: ಅತೀ ದೊಡ್ಡ ಫುಡ್, ಫನ್ ಫ್ಯಾಷನ್ ಫೆಸ್ಟಿವಲ್