ತಗಡು ಶೆಡ್‌ನಲ್ಲಿ ಬದುಕು ನರಕ: ಹಕ್ಕುಪತ್ರ ನೀಡಿ ತಿರುಗಿ ನೋಡದ ಸರ್ಕಾರ
ಯಾದಗಿರಿ ಜಿಲ್ಲೆಯ ಗುರಮಿಟಕಲ್ ಪಟ್ಟಣದಲ್ಲಿ, ಸೈಟ್‌ಗಾಗಿ 30 ವರ್ಷಗಳಿಂದ ಜನರು ಕಾಯುತ್ತಿದ್ದಾರೆ.
ಗುರುಮಿಟಕಲ್ ಪಟ್ಟಣದಲ್ಲಿ ಸೈಟ್'ಗಾಗಿ ಪುರಸಭೆಗೆ ಅಲೆದು ಅಲೆದು ಸುಸ್ತಾಗಿ ಬೇಸತ್ತಿದ್ದಾರೆ ಜನರು. ಕಳೆದ 30 ವರ್ಷಗಳ ಹಿಂದೆ ಬಡವರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರ ಆಶ್ರಯ ಯೋಜನೆ ಜಾರಿಗೆ ತಂದಿತ್ತು. ಹಾಗೆಯೇ ಪಟ್ಟಣದ ನಾರಾಯಣಪುರ ಬಡಾವಣೆಯ ಸರ್ವೆ ನಂ. 25ರಲ್ಲಿ, 3 ಎಕರೆ ಜಾಗದಲ್ಲಿ ಮನೆ ನಿರ್ಮಾಣಕ್ಕಾಗಿ ಜಾಗವನ್ನು ಕೂಡ ಗುರುತಿಸಲಾಗಿತ್ತು. 1991-92ರ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಅಧಿಕಾರದ ಅವಧಿಯಲ್ಲಿ 131 ಬಡ ಫಲಾನುಭವಿಗಳನ್ನ ಗುರುತಿಸಿ ಪಟ್ಟಣ ಪಂಚಾಯತಿಯಿಂದ 20X30 ನಿವೇಶನ ನೀಡಲು ಹಕ್ಕುಪತ್ರ ವಿತರಣೆ ಮಾಡಿದೆ. ಆದ್ರೆ 30ವರ್ಷ ಕಳೆದ್ರೂ ಕೂಡ ಫಲಾನುಭವಿಗಳಿಗೆ ಜಾಗವನ್ನು ನೀಡದೆ ಅಧಿಕಾರಿ, ಜನಪ್ರತಿನಿಧಿಗಳು ಬಡ ಜನರ ಜೀವನದ ಜೊತೆ ಚೆಲ್ಲಾಟ ಆಡ್ತಿದ್ದಾರೆ.
Bengaluru: ಸಿಲಿಕಾನ್ ಸಿಟಿಯಲ್ಲಿ ಗುಂಡಿ ಬಿದ್ದ ರಸ್ತೆಗೆ ಮತ್ತೊಂದು ಬಲಿ