Asianet Suvarna News Asianet Suvarna News

BIG 3 Impact: 2 ವರ್ಷಗಳಿಂದ ಪಾಳು ಬಿದ್ದಿದ್ದ ಬಳ್ಳಾರಿ ಪ್ರವಾಸಿ ಮಂದಿರ ಉದ್ಘಾಟನೆ

BIG 3 Impact: ಉದ್ಘಾಟನೆಯಾಗದೇ ಪಾಳು ಬಿದ್ದಿದ್ದ ಪ್ರವಾಸಿ ಮಂದಿರದ ಬಗ್ಗೆ ವರದಿ ಪ್ರಸಾರವಾಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತಿದ್ದಾರೆ. 

ಬಳ್ಳಾರಿ (ಆ. 08): ಗಣಿನಾಡು ಬಳ್ಳಾರಿಯಲ್ಲಿ (Ballari)  5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಪ್ರವಾಸಿ ಮಂದಿರ ಉದ್ಘಾಟನೆಯಾಗದೇ ಪಾಳು ಬಿದ್ದಿತ್ತು. ಪ್ರವಾಸಿ ಮಂದಿರದ ನಿರ್ಮಾಣ ಕಾರ್ಯ ಸಂಪೂರ್ಣಗೊಂಡು 2 ವರ್ಷ ಕಳೆದಿದ್ದರೂ ಪ್ರವಾಸಿ ಮಂದಿರ ಉದ್ಘಾಟನೆಯಾಗಿರಲಿಲ್ಲ. ಈ ಅತಿಥಿ ಗೃಹ ಹೇಳೋರಿಲ್ಲ, ಕೇಳೋರಿಲ್ಲ ಎಂಬಂತಾಗಿತ್ತು. ಈ ಪ್ರವಾಸಿ ಮಂದಿರ ಪಾಲು ಬಿದ್ದಿರುವ ಬಗ್ಗೆ ಬಿಗ್‌ 3 ವರದಿ ಮಾಡಿತ್ತು. ವರದಿ ಪ್ರಸಾರವಾಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತಿದ್ದು ಈಗ ಪ್ರವಾಸಿ ಮಂದಿರಕ್ಕೆ ಉದ್ಘಾಟನೆ ಭಾಗ್ಯ ಸಿಕ್ಕಿದೆ. ಉದ್ಘಾಟನೆ ಕಾರ್ಯಕ್ರಮದಲ್ಲಿ ಸಚಿವ ಶ್ರೀರಾಮಲು ಸೇರಿದಂತೆ ಅಧಿಕಾರಿಗಳು, ಸಚಿವರ ಪಾಲ್ಗೊಂಡಿದ್ದಾರೆ. 

Big 3: ಹರಿಹರದ ರಸ್ತೆ ಸಂಪೂರ್ಣ ಕೆಸರುಮಯ: ಶ್ರೀರಾಮ ದರ್ಶನವೇ ದೊಡ್ಡ ಸವಾಲು

Video Top Stories