Bengaluru: ಸಂಜಯ್ ನಗರ ಯುವತಿ ಮೇಲೆ ಹಲ್ಲೆ ಪ್ರಕರಣ; ಆರೋಪಿ ಮಂಜುನಾಥ್ ಗೌಡ ಬಂಧನ

ಬೆಂಗಳೂರಿನ ಸಂಜಯನಗರದಲ್ಲಿ ಅಪಾರ್ಟ್‌ಮೆಂಟ್‌ ಮಾಲೀಕನ ಸಹೋದರ ಮಹಿಳೆಯ ಮೇಲೆ ಹಲ್ಲೆ ನಡೆಸಿ ಅವಾಚ್ಯವಾಗಿ ನಿಂದಿಸಿದ್ದಾನೆ ಎಂಬ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಮಂಜುನಾಥ್‌ ಗೌಡ ಎಂಬ ಕ್ರಿಮಿನಲ್‌ ಹಿನ್ನಲೆ ಹೊಂದಿರುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

First Published Dec 8, 2024, 6:10 PM IST | Last Updated Dec 8, 2024, 6:10 PM IST

ಬೆಂಗಳೂರು (ಡಿ.8): ಅಪಾರ್ಟ್‌ಮೆಂಟ್‌ ಮಾಲೀಕನ ಸಹೋದರ ತನ್ನ ಮೇಲೆ ಹಲ್ಲೆ ನಡೆಸಿ ಅವಾಚ್ಯವಾಗಿ ನಿಂದಿಸಿದ್ದಾನೆ ಎಂದು ಸಂಗೀತಾ ರಾಯ್‌ ಚೌಧರಿ ಎನ್ನುವ ಮಹಿಳೆ ನೀಡಿದ್ದ ದೂರಿನ ಆಧಾರದ ಮೇಲೆ ಆರೋಪಿ ಮಂಜುನಾಥ ಗೌಡನನ್ನು ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥ್‌ ಗೌಡ ಕ್ರಿಮಿನಲ್‌ ಹಿನ್ನಲೆ ಹೊಂದಿರುವ ವ್ಯಕ್ತಿ. ಈ  ಹಿಂದೆಯೂ ಆತನನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನ ಸಂಜಯನಗರದಲ್ಲಿ ಈ ಘಟನೆ ನಡೆದಿದೆ.

'ಕನ್ನಡದಿಂದಾಗಿಯೇ ಬೆಂಗಳೂರು ಕುಸಿಯುತ್ತದೆ..' Diljit Dosanjh ಶೋ ವೇಳೆ ಯುವತಿಗೆ ಕಿರುಕುಳ!

ಡಿಸೆಂಬರ್‌ 3ರ ರಾತ್ರಿ 10.30ರ ವೇಳೆಗೆ ಪಾರ್ಸೆಲ್‌ ತೆಗೆದುಕೊಳ್ಳಲು ಅಪಾರ್ಟ್‌ಮೆಂಟ್‌ನ ಮುಖ್ಯ ಗೇಟ್‌ ಬಳಿ ಹೋಗಿದ್ದೆ. ಈ ವೇಳೆ ಅಲ್ಲಿಯೇ ನಿಂತಿದ್ದ ಮಂಜುನಾಥ್‌ ಗೌಡ ನನ್ನನ್ನು ಅವಾಚ್ಯವಾಗಿ ನಿಂದಿಸಿದ್ದಾನೆ. ಮದ್ಯ ಸೇವಿಸಿರಬಹುದು ಎನ್ನುವ ಕಾರಣಕ್ಕೆ ಆತನ ಮಾತಿಗೆ ಗಮನ ನೀಡಿರಲಿಲ್ಲ. ಆದರೆ, ಆತ ಏಕಾಏಕಿ ನನ್ನ ಕಪಾಳಕ್ಕೆ ಬಾರಿಸಿದ. ನನ್ನ ಕೈಬೆರಳು ಕೂಡ ಕಚ್ಚಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.