Coronavirus: ಬಿಎಂಟಿಸಿಯಲ್ಲಿ ಹೆಚ್ಚಾದ ಕೊರೋನಾ: 163 ಸಿಬ್ಬಂದಿಗೆ ಸೋಂಕು ದೃಢ
ನಗರದ ಪ್ರಮುಖ ಸಾರಿಗೆ ಸಂಸ್ಥೆಗಳಾದ ನಮ್ಮ ಮೆಟ್ರೋ ಮತ್ತು ಬಿಎಂಟಿಸಿ ಸಿಬ್ಬಂದಿಯಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಕಳೆದ ವಾರಕ್ಕೆ ಹೋಲಿಸಿದರೆ ಸಾಕಷ್ಟು ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣ ಕಂಡು ಬಂದಿವೆ.
ಬೆಂಗಳೂರು (ಜ.19): ನಗರದ ಪ್ರಮುಖ ಸಾರಿಗೆ ಸಂಸ್ಥೆಗಳಾದ ನಮ್ಮ ಮೆಟ್ರೋ (Namma Metro) ಮತ್ತು ಬಿಎಂಟಿಸಿ ಸಿಬ್ಬಂದಿಯಲ್ಲಿ (BMTC Staff) ಕೊರೋನಾ ಸೋಂಕು (Coronavirus) ಹೆಚ್ಚಾಗುತ್ತಿದೆ. ಕಳೆದ ವಾರಕ್ಕೆ ಹೋಲಿಸಿದರೆ ಸಾಕಷ್ಟು ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣ ಕಂಡು ಬಂದಿವೆ. ಕಳೆದ ಕೆಲ ದಿನಗಳಲ್ಲಿ ಎರಡು ನಿಗಮಗಳಲ್ಲಿ ಒಟ್ಟು 264 ಸಿಬ್ಬಂದಿಗೆ ಪಾಸಿಟಿವ್ (Positive) ದೃಢಪಟ್ಟಿದೆ. ಬಿಎಂಟಿಸಿಯಲ್ಲಿ ಈವರೆಗೆ 163 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ನಮ್ಮ ಮೆಟ್ರೋ ನಿಗಮದ 101 ಸಿಬ್ಬಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
Mysore:ಆ್ಯಂಬುಲೆನ್ಸ್ ಚಕ್ರಕ್ಕೆ ಹುರಳಿ ಸೊಪ್ಪು ಸಿಕ್ಕಿ ಅವಾಂತರ; ರಸ್ತೆ ಮಧ್ಯೆ ಗರ್ಭಿಣಿ ಪರದಾಟ
ಕಳೆದ ವಾರ ಕೇಂದ್ರ ಕಚೇರಿಯ 7 ಸಿಬ್ಬಂದಿಗೆ ಪಾಸಿಟಿವ್ ಬಂದಿತ್ತು. ಹೀಗಾಗಿ, ಹೆಚ್ಚುವರಿ 380 ಸಿಬ್ಬಂದಿಗೆ ಕೋವಿಡ್ ಟೆಸ್ಟ್ ನಡೆಸಲಾಗಿತ್ತು. 87 ಜನರಿಗೆ ಕೋವಿಡ್ ಪಾಸಿಟಿವ್ ರಿಪೋರ್ಟ್ ಬಂದಿದೆ. ಪಾಸಿಟಿವ್ ರೇಟ್ ಹೆಚ್ಚಾದ ಹಿನ್ನೆಲೆಯಲ್ಲಿ ಸದ್ಯ ಅರ್ಧದಷ್ಟು ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪಾಸಿಟಿವ್ ಆದ ಸಿಬ್ಬಂದಿಗೆ ಹೋಂ ಐಸೋಲೇಷನ್ನಲ್ಲಿರಲು ಸೂಚಿಸಲಾಗಿದೆ. ವಿಶೇಷವಾಗಿ ಕೊರೋನಾ ಸೋಂಕು ದೃಢಪಟ್ಟ ಸಿಬ್ಬಂದಿಗಳಿಗೆ ಒಂದು ವಾರ ಯಾವುದೇ ವೇತನ ಕಡಿತಗೊಳಿಸದೆ ರಜೆ ನೀಡುವಂತೆ ಬಿಎಂಟಿಸಿ ಸೂಚನೆ ನೀಡಿದೆ.