Mysore:ಆ್ಯಂಬುಲೆನ್ಸ್ ಚಕ್ರಕ್ಕೆ ಹುರಳಿ ಸೊಪ್ಪು ಸಿಕ್ಕಿ ಅವಾಂತರ; ರಸ್ತೆ ಮಧ್ಯೆ ಗರ್ಭಿಣಿ ಪರದಾಟ
ಹುರುಳಿ ಒಕ್ಕಣೆಯಿಂದಾಗಿ ರಸ್ತೆ ತಡೆ
ಅರ್ಧಗಂಟೆ ಆ್ಯಂಬುಲೆನ್ಸ್ ಅಲ್ಲೇ ಪರದಾಟ ನಡೆಸಿದ ಗರ್ಭಿಣಿ
ಮೈಸೂರಿನ ನಂಜನಗೂಡಿನಲ್ಲಿ ನಡೆದ ಘಟನೆ
ಮೈಸೂರು (ಜ.19): ರಸ್ತೆಯಲ್ಲಿ ಹುರುಳಿ ಒಕ್ಕಣೆ ಮಾಡಿದ್ದರಿಂದಾಗಿ ಆಸ್ಪತ್ರೆಗೆ ದಾಖಲಾಗಬೇಕಿದ್ದ ಗರ್ಭಿಣಿಯೊಬ್ಬರು ಆ್ಯಂಬುಲೆನ್ಸ್ ಅಲ್ಲೇ ಅರ್ಧಗಂಟೆಗೂ ಅಧಿಕ ಕಾಲ ಪರದಾಟ ನಡೆಸಿದ ಘಟನೆ ಮೈಸೂರು (Mysore) ಜಿಲ್ಲೆಯ ನಂಜನಗೂಡು (Nanjangud) ತಾಲೂಕಿನ ಕೂಡ್ಲಾಪುರದಲ್ಲಿ ನಡೆದಿದೆ. ಆ್ಯಂಬುಲೆನ್ಸ್ ನ ಚಕ್ರಕ್ಕೆ ಹುರಳಿ ಸೊಪ್ಪುಗಳು ಸಿಕ್ಕಿ ಹಾಕಿಕೊಂಡಿದ್ದರಿಂದ ಆ್ಯಂಬುಲೆನ್ಸ್ ರಸ್ತೆಯಲ್ಲಿಯೇ ನಿಂತುಬಿಟ್ಟಿತ್ತು. ಈ ಹಂತದಲ್ಲಿ ಸ್ಥಳೀಯ ರೈತರ ನೆರವಿನಿಂದ ಹುರಳಿ ಸೊಪ್ಪುಗಳನ್ನು ತೆಗೆದುಹಾಕಿ ಆ್ಯಂಬುಲೆನ್ಸ್ ಚಲಿಸಲು ಅರ್ಧಗಂಟೆಗೂ ಹೆಚ್ಚು ಕಾಲ ಬೇಕಾಯಿತು.
Shivamogga: ಕೊನೆಗೂ ತುಮರಿಗೆ ಬಂತು ಆ್ಯಂಬುಲೆನ್ಸ್, ಮಾತು ಉಳಿಸಿಕೊಂಡ ಶಾಸಕ
ರಸ್ತೆಯಲ್ಲಿ ರೈತರು ಹುರುಳಿ ಒಕ್ಕಣೆ ಮಾಡುತ್ತಿದ್ದರು. ಈ ವೇಳೆ ಬಂದ ಆ್ಯಂಬುಲೆನ್ಸ್ ನ ಚಕ್ರಕ್ಕೆ ಸೊಪ್ಪುಗಳು ಸಿಕ್ಕಿ ಹಾಕಿಕೊಂಡಿದ್ದರಿಂದ ಮುಂದೆ ಹೋಗಲು ಸಾಧ್ಯವಾಗಿರಲಿಲ್ಲ. ಬಳಿಕ ರೈತರು ಸಾಕಷ್ಟು ಶ್ರಮವಹಿಸಿ ಸೊಪ್ಪುಗಳು ತೆಗೆದುಹಾಕಿದ ಬಳಿಕ ಆ್ಯಂಬುಲೆನ್ಸ್ ಮುಂದೆ ಸಾಗಿದ ಘಟನೆ ನಡೆದಿದೆ.