Asianet Suvarna News Asianet Suvarna News

ಕರೆಂಟ್ ಕಣ್ಣಾಮುಚ್ಚಾಲೆಗೆ ಹೈರಾಣಾದ ರೈತರು: ಬೆಳೆ ಉಳಿಸಿಕೊಳ್ಳಲು ಹರಸಾಹಸ

ಸಚಿವರ, ಜಿಲ್ಲಾಧಿಕಾರಿಗಳ ಸಭೆಯಲ್ಲಿ ಮತ್ತು ರೈತರಿಗೆ ಮಾಹಿತಿ ನೀಡೋವಾಗ ಮಾತ್ರ ಎಷ್ಟೇ ಕಷ್ಟವಾದ್ರೂ ರೈತರಿಗೆ ಏಳು ತಾಸು ವಿದ್ಯುತ್ ನೀಡುತ್ತೇವೆ ಎನ್ನುತ್ತಿದೆ ಸರ್ಕಾರ. ಆದ್ರೇ ವಾಸ್ತವವಾಗಿ ಹಳ್ಳಿ ಕಡೆ ಹೊಲ ಗದ್ದೆಗಳ ಕಡೆ ಹೋಗಿ ನೋಡಿದ್ರೇ, ಏಳಲ್ಲ ಕನಿಷ್ಠ ನಾಲ್ಕು ತಾಸು ಕೂಡ ಸಮಯಕ್ಕೆ ಸರಿಯಾಗಿ ವಿದ್ಯುತ್  ಬರುತ್ತಿಲ್ಲ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ಬೆಳೆದು ನಿಂತ ಬೆಳೆ ನೀರಿಲ್ಲದೇ ಹಾಳಾಗಿ ಹೋಗ್ತದೆ ಅನ್ನೋ ಅತಂಕದಲ್ಲಿದ್ದಾರೆ ಬಳ್ಳಾರಿ ರೈತರು. 

ರಾಜ್ಯದ ಎರಡನೇ ಅತಿದೊಡ್ಡ ಜಲಾಶವಾಗಿರೋ ತುಂಗಭದ್ರಾ ಜಲಾಶಯ ನಿರೀಕ್ಷೆಯಷ್ಟು ಈ ಬಾರಿ ತುಂಬಿಲ್ಲ. ಆದ್ರೂ ರೈತರು ಇರೋ ಬರೋ ನೀರಿನಲ್ಲಿ ಹತ್ತಿ, ಭತ್ತ, ಮೆಣಸಿನ ಕಾಯಿ ಸೇರಿದಂತೆ ಇತರೆ ಬೆಳೆಯನ್ನು ಬೆಳೆದಿದ್ದಾರೆ. ಆದ್ರೆ, ಈಗ ಬೆಳೆಗಳಿಗೆ ನೀರಿಲ್ಲದೇ ಒಣಗುತ್ತಿವೆ. ನದಿ,ಕೆರೆ, ಬಾವಿ, ತುಂಗಭದ್ರಾದ ಕಾಲುವೆಯಲ್ಲಿನ ನೀರನ್ನಾದ್ರೂ ಬಳಸಿ ಬೆಳೆ ಉಳಿಸಿಕೊಳ್ಳೋಣ ಅಂದ್ರೆ ವಿದ್ಯುತ್ ಇಲ್ಲ. ಕೆಲವರು ಟ್ರಾಕ್ಟರ್ಗೆ ಜನರೇಟರ್ ಕಟ್ಟಿ ನೀರು ಹರಿಸೋ ಸಾಹಸ ಮಾಡ್ತಿದ್ರೆ, ಮತ್ತೆ ಕೆಲವರು ಕರೆಂಟ್ ಬರೋದನ್ನು ಹಗಲಿರುಳು ಕಾಯ್ತಾ ಕುಳಿತಿದ್ದಾರೆ. ಬಳ್ಳಾರಿ ಉಸ್ತುವಾರಿ ಸಚಿವ ನಾಗೇಂದ್ರ ಮಾತ್ರ ಮೆಣಸಿನಕಾಯಿ ಮತ್ತು ಭತ್ತ ಕಟಾವಿಗೆ ಬರೋವರೆಗೂ ರೈತರಿಗೆ ನಿರಂತರವಾಗಿ ಏಳು ತಾಸು ವಿದ್ಯುತ್ ನೀಡಬೇಕೆಂದು ಅಧಿಕಾರಿಗಳಿಗೆ ಆದೇಶ ಮಾಡಿದ್ದಾರೆ. ಆದ್ರೆ 7 ತಾಸು ಹೋಗ್ಲಿ ಸರಿಯಾಗಿ ನಾಲ್ಕು ಗಂಟೆಯೂ ವಿದ್ಯುತ್ ಪೂರೈಕೆ ಆಗ್ತಿಲ್ವಂತೆ. ಸದ್ಯ ಬಳ್ಳಾರಿಗೆ ದಿನಕ್ಕೆ 150 ಮೆಗಾವ್ಯಾಟ್ ವಿದ್ಯುತ್ ಬೇಕು. ಆದ್ರೆ, ಸಿಕ್ತಿರೋದು 80 ರಿಂದ 90 ಮೆಗಾವ್ಯಾಟ್ ವಿದ್ಯುತ್.  ಹೀಗಾಗಿ ವಿದ್ಯುತ್ ಕೊರತೆ ಸರಿದೂಗಿಸಲು ಹಿಮಾಚಲ ಪ್ರದೇಶ ಮತ್ತು ಮೇಘಾಲಯದಿಂದ ವಿದ್ಯುತ್ ಖರೀದಿಗೆ ಮುಂದಾಗಿದ್ದು, ಯಾವುದೇ ಕಾರಣಕ್ಕೂ ರೈತರು ಭಯಪಡಬೇಕಿಲ್ಲ ಎನ್ನುತ್ತಿದ್ದಾರೆ ಸಚಿವರು. ಸಚಿವರು ವಿದ್ಯುತ್ ನೀಡುತ್ತೇವೆ ಭಯ ಬೇಡ ಎನ್ನುತ್ತಿದ್ದಾರೆ. ಆದ್ರೆ, ರೈತರ ಬೆಳೆಗಳು ಮಾತ್ರ ಒಣಗುತ್ತಲೇ ಇವೆ.  ವಿದ್ಯುತ್  ಜೊತೆಗೆ ಕಾಲುವೆಗೆ ಸಮರ್ಪಕವಾಗಿ ನೀರು ಕೂಡ ಪೂರೈಸಬೇಕಿದೆ.

ಇದನ್ನೂ ವೀಕ್ಷಿಸಿ:  ರಾಯಚೂರಿನಲ್ಲಿ ಬೆಳೆಗೆ ನೀರಿಲ್ಲದೆ ಹಾಹಾಕಾರ: ಒಣಗಿ ನಿಂತ ಭತ್ತದ ಬೆಳೆ

Video Top Stories