ಬೆಳಗಾವಿಯಲ್ಲಿ ವಿಶಿಷ್ಟ ಪೊಲೀಸ್ ಮ್ಯೂಸಿಯಂ ಉದ್ಘಾಟನೆ
* ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆಯ ಪ್ಲಾನ್‌ಗೆ ಡಿಜಿಪಿ ಪ್ರವೀಣ್ ಸೂದ್ ಫಿದಾ
* 120 ವರ್ಷಗಳ ಇತಿಹಾಸವಿರುವ ಬೆಳಗಾವಿ ಪೊಲೀಸ್ ಇಲಾಖೆ
* ಪೊಲೀಸ್ ವಾದ್ಯ ವೃಂದ, ಗ್ರೆನೇಡ್ ಸೇರಿ ಹಲವು ಪರಿಕರ ಸಂಗ್ರಹ
ಬೆಳಗಾವಿ(ಆ.20): ಕುಂದಾನಗರಿ ಬೆಳಗಾವಿಯಲ್ಲಿ ವಿನೂತನ ಪೊಲೀಸ್ ಮ್ಯೂಸಿಯಂ ಉದ್ಘಾಟನೆಯಾಗಿದೆ. ಪುರಾತನ ಕಾಲದ ಬೃಹದಾಕಾರದ ಪೊಲೀಸ್ ವಾದ್ಯ ವೃಂದ, ಗ್ರೆನೇಡ್ ಸೇರಿ ಹಲವು ಪರಿಕರಗಳನ್ನ ಸಂಗ್ರಹಿಸಲಾಗಿದೆ. ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆಯ ಪ್ಲಾನ್‌ಗೆ ಡಿಜಿಪಿ ಪ್ರವೀಣ್ ಸೂದ್ ಅವರೇ ಫಿದಾ ಆಗಿದ್ದಾರೆ. ಬ್ರಿಟಿಷರ ಕಾಲದಲ್ಲೂ ಪ್ರಮುಖವಾಗಿತ್ತು 120 ವರ್ಷಗಳ ಇತಿಹಾಸವಿರುವ ಬೆಳಗಾವಿ ಪೊಲೀಸ್ ಇಲಾಖೆ.