Asianet Suvarna News Asianet Suvarna News

ನ್ಯಾಷನಲ್‌ ಕಾಲೇಜು ಗ್ರೌಂಡ್‌ನಿಂದ ಮಾರುಕಟ್ಟೆ ಎತ್ತಂಗಡಿ: ಕಂಗಾಲಾದ ವ್ಯಾಪಾರಸ್ಥರು

ಮಾರ್ಕೆಟ್‌ ಖಾಲಿ ಮಾಡಿಸಿದ ಬಿಬಿಎಂಪಿ ಕಮೀಷನರ್| ನ್ಯಾಷನಲ್‌ ಕಾಲೇಜು ಗ್ರೌಂಡ್‌ನಿಂದ ಮಾರುಕಟ್ಟೆ|ವ್ಯಾಪಾರಸ್ಥರನ್ನ ತರಾಟೆಗೆ ತೆಗೆದುಕೊಂಡ ಬಿಬಿಎಂಪಿ ಕಮೀಷನರ್| 
 

First Published Mar 28, 2020, 4:25 PM IST | Last Updated Mar 28, 2020, 4:25 PM IST

ಬೆಂಗಳೂರು(ಮಾ.28): ನಗರದ ಕೆ.ಆರ್‌.ಮಾರ್ಕೆಟ್ ಅರ್ಧ ಭಾಗವನ್ನ ಬಸವನಗುಡಿ ನ್ಯಾಷನಲ್‌ ಕಾಲೇಜು ಗ್ರೌಂಡ್‌ಗೆ ಶಿಫ್ಟ್‌ ಮಾಡಲಾಗಿತ್ತು. ಅದೇ ರೀತಿ ಇಂದು ಕೂಡ ನ್ಯಾಷನಲ್‌ ಕಾಲೇಜು ಗ್ರೌಂಡ್‌ನಲ್ಲಿ ವ್ಯಾಪಾರಸ್ಥರು ಆಗಮಿಸಿದ್ದರು. ಆದರೆ, ಬಿಬಿಎಂಪಿ ಕಮೀಷನರ್ ಏಕಾಏಕಿ ಬಂದು ನಿಮಗೆ ಯಾರಿಲ್ಲಿ ಬರೋಕೆ ಹೇಳಿದ್ದು ಅಂತ ಮಾರ್ಕೆಟ್‌ ಖಾಲಿ ಮಾಡಿಸಿದ್ದಾರೆ. 

ಏಕಾಏಕಿ ಉಸಿರಾಟದ ತೊಂದರೆ; ಕಾಟನ್‌ಪೇಟೆಯಲ್ಲಿ ಕೊರೋನಾ ಶಂಕಿತ?

ಬೆಳಿಗ್ಗೆ ವ್ಯಾಪಾರ ಮಾಡಲು ಬಂದಿದ್ದ ವ್ಯಾಪಾರಾಸ್ಥರನ್ನ ಪೊಲೀಸರು ಸ್ಥಳದಿಂದ ಖಾಲಿ ಮಾಡಿಸಿದ್ದಾರೆ. ಇದರಿಂದ ವ್ಯಾಪಾರಸ್ಥರು ಕಂಗಾಲಾಗಿದೆ ಹೋಗಿದ್ದಾರೆ. ಇದೇ ವೇಳೆ ಬಿಬಿಎಂಪಿ ಕಮೀಷನರ್ ವ್ಯಾಪಾರಸ್ಥರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.