Asianet Suvarna News Asianet Suvarna News

ತುಂಗಭದ್ರ ಜಲಾಶಯದಲ್ಲಿ ದಾಖಲೆ ಪ್ರಮಾಣದ ನೀರು; ರೈತರ ಮೊಗದಲ್ಲಿ ಮಂದಹಾಸ

ಪೂರ್ವ ಮುಂಗಾರು ಮಳೆ ಹಿನ್ನೆಲೆ ಹೊಸಪೇಟೆ ಬಳಿ ಇರೋ ರಾಜ್ಯದ ಎರಡನೇ ಅತಿದೊಡ್ಡ ಜಲಾಶಯ ಎನ್ನುವ ಖ್ಯಾತಿಪಡೆದಿರೋ ತುಂಗಭದ್ರಾ ಜಲಾಶಯಕ್ಕೆ ದಾಖಲೆ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. 

ಪೂರ್ವ ಮುಂಗಾರು ಮಳೆ ಹಿನ್ನೆಲೆ ಹೊಸಪೇಟೆ ಬಳಿ ಇರೋ ರಾಜ್ಯದ ಎರಡನೇ ಅತಿದೊಡ್ಡ ಜಲಾಶಯ ಎನ್ನುವ ಖ್ಯಾತಿಪಡೆದಿರೋ ತುಂಗಭದ್ರಾ ಜಲಾಶಯಕ್ಕೆ ದಾಖಲೆ ಪ್ರಮಾಣದಲ್ಲಿ ನೀರು ಹರಿದು ಬಂದಿದೆ ಮಲೆನಾಡು ಸೇರಿದಂತೆ ತುಂಗಭದ್ರಾ ಜಲಾಯನ ಪ್ರದೇಶದಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ಈ ಬಾರಿ ಮೇ ತಿಂಗಲ್ಲಿ ದಾಖಲೆ ಪ್ರಮಾಣದಲ್ಲಿ ನೀರು ಹರಿದು ಬಂದಿರೋದು ಈ ಬಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಇನ್ನೂ ಕಳೆದೆರಡು ದಿನಗಳಲ್ಲಿ 13 ಟಿಎಂಸಿ ಗೂ ಹೆಚ್ಚು ನೀರು ಹರಿದು ಬಂದಿದ್ದು ಇದು ಸಾರ್ವಕಾಲಿಕ ದಾಖಲೆ ಎನ್ನಲಾಗ್ತಿದೆ.. ಯಾಕಂದ್ರೇ, ಮೇ ನಲ್ಲಿ ಇಷ್ಟೊಂದು ಪ್ರಮಾಣದ ನೀರು ಬಂದಿರೋದು ಇದೆ ಮೊದಲು ಎನ್ನುವುದು ನೀರಾವರಿ ತಜ್ಞರ ಅಭಿಪ್ರಾಯವಾಗಿದೆ. ಮೊನ್ನೆ 19.766 ಟಿಎಂಸಿ ಇದ್ದ ನೀರು ಇಂದು 31.481  ಟಿಎಂಸಿ ನೀರು ಸಂಗ್ರಹವಾಗಿದೆ. ಒಳಹರಿವಿನಲ್ಲೂ ಕೂಡ ಹೆಚ್ಚಳವಾಗಿದೆ.  

Chamarjnagar:ಸುವರ್ಣಾವತಿ-ಚಿಕ್ಕಹೊಳೆ ಡ್ಯಾಂ: ಹಲವು ದಶಕದ ಬಳಿಕ ಮೇನಲ್ಲಿ ಭರ್ತಿ

ಕಳೆದರೆಡು ದಿನ 80 ಸಾವಿರ ಕ್ಯೂಸೆಕ್ ಒಳಹರಿವು ಇತ್ತು. ಸದ್ಯ 45,858 ಕ್ಯೂಸೆಕ್ ನೀರು ಒಳಹರಿವು ಇದೆ. ಹವಾಮಾನ ಇಲಾಖೆ ಪ್ರಕಾರ ಇನ್ನೆರಡು ದಿನಗಳ ಕಾಲ ಮಲೆನಾಡು ಸೇರಿದಂತೆ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರೋ ಮಳೆಯಿಂದಾಗಿ ಮತ್ತಷ್ಟು ಅಪಾರ ಪ್ರಮಾಣದ ನೀರು ತುಂಗಭದ್ರಾ ಜಲಾಶಯಕ್ಕೆ ಹರಿದು ಬರೋ ಸಾಧ್ಯತೆ ಇದ್ದು, ಮುಂಗಾರು ಆರಂಭಕ್ಕೆ ಮುನ್ನವೇ ಈ ಬಾರಿ ಜಲಾಶಯ ಬಹುತೇಕ ಆರ್ಧಕ್ಕೂ ಹೆಚ್ಚು ತುಂಬುತ್ತದೆ ಎನ್ನಲಾಗ್ತಿದೆ. ಇದರ ಜೊತೆ ಮುಂಗಾರ ಆರಂಭವಾದ್ರೇ ಜೂನ್ ಎರಡನೇ ವಾರದಷ್ಟೊತ್ತಿಗೆ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ. 

ಸೇತುವೆ ಕಾಮಗರಿ ಮುಗಿದು 2 ವರ್ಷವದ್ರೂ ಬ್ರಿಡ್ಜ್‌ಗಿಲ್ಲ ಸಂಪರ್ಕ ರಸ್ತೆ...!

ರಾಜ್ಯದ ಬಳ್ಳಾರಿ , ರಾಯಚೂರು, ಕೊಪ್ಪಳ ವಿಜಯನಗರ ಜಿಲ್ಲೆ ಸೇರಿದಂತೆ ಆಂಧ್ರದ ಅನಂತಪುರ ಕರ್ನೂಲ್ ಸೇರಿ ಒಟ್ಟು ಹತ್ತಕ್ಕೂ ಹೆಚ್ಚು ಜಿಲ್ಲೆಯ ಜನರು ಇದೇ ಜಲಾಶಯದ ನೀರನ್ನು ಅವಲಂಬಿಸಿದ್ದಾರೆ. ಕುಡಿಯೋ ನೀರು ಸೇರಿದಂತೆ  ಮೂರು ಲಕ್ಷಕ್ಕೂ ಹೆಕ್ಟರ್ ಪ್ರದೇಶಕ್ಕೆ ನೀರು ಒದಗಿಸಲಿರೋ ಜಲಾಶಯ ಅವಧಿಗೂ ಮುನ್ನ ತುಂಬುವ ಭರವಸೆ ಇದೆ.

Video Top Stories