Chamarajnagar: ಸುವರ್ಣಾವತಿ - ಚಿಕ್ಕಹೊಳೆ ಡ್ಯಾಂ; ಹಲವು ದಶಕದ ಬಳಿಕ ಮೇನಲ್ಲಿ ಭರ್ತಿ
ಸುವರ್ಣಾವತಿ (Suvarnavathi) ಚಿಕ್ಕಹೊಳೆ (Chikkahole) ಜಲಾಶಯಗಳು (Reservior) ಹಿಂದೆಲ್ಲಾ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಭರ್ತಿಯಾಗುತ್ತಿದ್ದವು. ಆದರೆ ಈ ವರ್ಷ ಮೇ ತಿಂಗಳಲ್ಲೇ ಡ್ಯಾಂ ಭರ್ತಿಯಾಗಿದ್ದು ಜಲ ವೈಭವ ವೀಕ್ಷಣೆಗೆ ಸಾರ್ವಜನಿಕರು ಬರುತ್ತಿದ್ದಾರೆ.
ಸುವರ್ಣಾವತಿ (Suvarnavathi) ಚಿಕ್ಕಹೊಳೆ (Chikkahole) ಜಲಾಶಯಗಳು (Reservior) ಹಿಂದೆಲ್ಲಾ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಭರ್ತಿಯಾಗುತ್ತಿದ್ದವು. ಆದರೆ ಈ ವರ್ಷ ಮೇ ತಿಂಗಳಲ್ಲೇ ಡ್ಯಾಂ ಭರ್ತಿಯಾಗಿದ್ದು ಜಲ ವೈಭವ ವೀಕ್ಷಣೆಗೆ ಸಾರ್ವಜನಿಕರು ಬರುತ್ತಿದ್ದಾರೆ.
ಕರ್ನಾಟಕಕ್ಕೆ ಸೇರಿರುವ ಬೇಡಗುಳಿ, ತಮಿಳುನಾಡಿನ ದಿಂಬಂ, ಹಾಸನೂರು ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಜಲಾಶಯಗಳಿಗೆ ಜೀವಕಳೆ ತಂದಿದೆ. ಸುವರ್ಣಾವತಿ ಜಲಾಶಯದ ನೀರು ಸಂಗ್ರಹಣದ ಗರಿಷ್ಠ ಮಟ್ಟ 2455 ಅಡಿ. ಎರಡು ಅಡಿ ಬಾಕಿಯಿದ್ದು, ಬಹುತೇಕ ಭರ್ತಿ ಹಂತದಲ್ಲಿದೆ. ಅದೇ ರೀತಿ ಚಿಕ್ಕಹೊಳೆ 2449 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು ಭರ್ತಿಯಾಗಿದೆ. ಸುವರ್ಣಾವತಿ ಜಲಾಶಯ 6400 ಎಕರೆ ಹಾಗು ಚಿಕ್ಕಹೊಳೆ 4000 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಅಸಾನಿ ಚಂಡಮಾರುತದಿಂದ (Cyclone) ಹವಾಮಾನದಲ್ಲಿ ಉಂಟಾದ ಬದಲಾವಣೆಯಿಂದ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಮಳೆ ಸುರಿದಿದ್ದು, ಜಲಾಶಯಗಳು ನಳನಳಿಸುತ್ತಿವೆ.
ಇನ್ನೂ ಈ ಜೋಡಿ ಜಲಾಶಯ ಭರ್ತಿಯಿಂದ ಅಂತರ್ಜಲ ಮಟ್ಟ ವೃದ್ದಿಯಾದರೆ ಸುವರ್ಣಾವತಿ (Suvarnavathi Dam) 5 ಟಿಎಂಸಿ, ಚಿಕ್ಕಹೊಳೆ ಮುಕ್ಕಾಲು ಟಿಎಂಸಿ ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಈ ಜಲಾಶಯಗಳು 11 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಿದೆ. ತಮಿಳುನಾಡು, ಕರ್ನಾಟಕ ಹೆದ್ದಾರಿ ಪಕ್ಕದಲ್ಲಿಯೇ ಡ್ಯಾಂ ಇರುವುದರಿಂದ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗಿದೆ. ಮತ್ತಷ್ಟು ಪ್ರವಾಸಿಗರು ಬರಬೇಕಾದರೆ ಮೂಲಭೂತ ಸೌಲಭ್ಯ ಒದಗಿಸಿ ಪ್ರವಾಸೋದ್ಯಮಕ್ಕೂ ಉತ್ತೇಜನ ಕೊಟ್ರೆ ಆದಾಯ ಬರುತ್ತೆ ಅಂತಾರೆ ಸ್ಥಳೀಯರು..
ಒಟ್ನಲ್ಲಿ ಬರದನಾಡು ಚಾಮರಾಜನಗರದ ಅವಳಿ ಜಲಾಶಯಗಳು ಅವಧಿಗೂ ಮುಂಚೆಯೇ ತುಂಬಿದ್ರಿಂದ ರೈತರು ಕೂಡ ಖುಷಿಯಲ್ಲಿದ್ದಾರೆ.ಇದರ ಜೊತೆಗೆ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತಹ ಸೌಲಭ್ಯ ಕಲ್ಪಿಸಿದ್ರೆ ಪ್ರವಾಸಿಗರ ಅಚ್ಚುಮೆಚ್ಚಿನ ಸ್ಪಾಟ್ ಆಗೋದ್ರಲ್ಲಿ ಅನುಮಾನವಿಲ್ಲ.