Asianet Suvarna News Asianet Suvarna News

ಮುನಿಸಿಕೊಂಡ ಇಬ್ಬರು ಹೆಂಡ್ತಿರು ಬೇಕೆಂದು ಮರವೇರಿದ ಪತಿರಾಯ: ಬಳಿಕ ಆಗಿದ್ದೇನು?

ಎರಡು ಮದುವೆಯಾದರು ಸಹ ಇಬ್ಬರು ಪತ್ನಿಯರ ಪೈಕಿ ಒಬ್ಬರು ನನ್ನೊಂದಿಗೆ ಜೀವನ ಮಾಡುತ್ತಿಲ್ಲವೆಂದು ಬೇಸತ್ತ ವ್ಯಕ್ತಿಯೊಬ್ಬ ಪತ್ನಿ ಬೇಕೆಂದು ತೆಂಗಿನ ಮರವೇರಿದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

First Published Dec 16, 2020, 9:24 PM IST | Last Updated Dec 16, 2020, 9:24 PM IST

ಬಳ್ಳಾರಿ, (ಡಿ.16): ಎರಡು ಮದುವೆಯಾದರು ಸಹ ಇಬ್ಬರು ಪತ್ನಿಯರ ಪೈಕಿ ಒಬ್ಬರು ನನ್ನೊಂದಿಗೆ ಜೀವನ ಮಾಡುತ್ತಿಲ್ಲವೆಂದು ಬೇಸತ್ತ ವ್ಯಕ್ತಿಯೊಬ್ಬ ಪತ್ನಿ ಬೇಕೆಂದು ತೆಂಗಿನ ಮರವೇರಿದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ರೇಣುಕಾಚಾರ್ಯಗೆ ದುರ್ಗುಟ್ಟಿದ್ದ ಕೋತಿ ಕೊನೆಗೂ ಅರೆಸ್ಟ್

ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಸಮೀಪದ ದಾಸೋಬನಹಳ್ಳಿ ಗ್ರಾಮದ ಗೊಲ್ಲರಹಟ್ಟಿ ನಿವಾಸಿ ದೊಡ್ಡಪ್ಪ (40) ಬುಧವಾರ ತೆಂಗಿನ ಮರವೇರಿ ಕುಳಿತಿದ್ದ. ಇಬ್ಬರು ಪತ್ನಿಯರ ಪೈಕಿ ಒಬ್ಬರು ನನ್ನೊಂದಿಗೆ ಜೀವನ ಮಾಡುತ್ತಿಲ್ಲ ಆಕೆ ವಾಪಸ್ ಬರಬೇಕು ಎಂದು ಪ್ರತಿಭಟನೆ ನಡೆಸಿದ್ದಾನೆ.