KSRTC ಸಿಬ್ಬಂದಿ ಎಡವಟ್ಟು, ಮಾನವೀಯತೆ ಮೆರೆದ ಪೊಲೀಸರು..!
ಬೆಂಗಳೂರಿಂದ ಬಂದವರು ಮುಂದೆ ಹೈದರಾಬಾದ್, ತೆಲಂಗಾಣ, ಛತ್ತೀಸಗಡ್‌ಗೆ ಹೋಗಬೇಕಿತ್ತು, ಸಂಜೆ ಏಳು ಗಂಟೆ ನಂತರ ಬಸ್ ಇಲ್ಲದ ಕಾರಣ ಹೊಸಪೇಟೆ ನಿಲ್ದಾಣದಲ್ಲಿ ಉಳಿಯ ಬೇಕಾಯ್ತು. ಆದರೆ ರಾತ್ರಿ ಬಸ್ ನಿಲ್ದಾಣದಲ್ಲಿ ಉಳಿದುಕೊಳ್ಳಲು ಕೆಎಸ್ಆರ್‌ಟಿಸಿ ಸಿಬ್ಬಂದಿ ಅವಕಾಶ ನೀಡಲಿಲ್ಲ.
ಬಳ್ಳಾರಿ(ಮೇ.20): ಬೆಂಗಳೂರಿನಿಂದ ಹೊಸಪೇಟೆಗೆ ಬಂದಿಳಿದ ವಲಸೆ ಕಾರ್ಮಿಕರು ಅನ್ನಾಹಾರವಿಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಸರಿಯಾದ ಸಮಯದಲ್ಲಿ ಪೊಲೀಸರ ಮಧ್ಯ ಪ್ರವೇಶದಿಂದಾಗಿ ಕಾರ್ಮಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.
ಹೌದು, ಬೆಂಗಳೂರಿಂದ ಬಂದವರು ಮುಂದೆ ಹೈದರಾಬಾದ್, ತೆಲಂಗಾಣ, ಛತ್ತೀಸಗಡ್‌ಗೆ ಹೋಗಬೇಕಿತ್ತು, ಸಂಜೆ ಏಳು ಗಂಟೆ ನಂತರ ಬಸ್ ಇಲ್ಲದ ಕಾರಣ ಹೊಸಪೇಟೆ ನಿಲ್ದಾಣದಲ್ಲಿ ಉಳಿಯ ಬೇಕಾಯ್ತು. ಆದರೆ ರಾತ್ರಿ ಬಸ್ ನಿಲ್ದಾಣದಲ್ಲಿ ಉಳಿದುಕೊಳ್ಳಲು ಕೆಎಸ್ಆರ್‌ಟಿಸಿ ಸಿಬ್ಬಂದಿ ಅವಕಾಶ ನೀಡಲಿಲ್ಲ.
ಕ್ವಾರೆಂಟೈನ್ ಸೆಂಟರ್‌ನ ಉಪಹಾರದಲ್ಲಿ ಹಲ್ಲಿ ಪತ್ತೆ..!
ಐವತ್ತಕ್ಕೂ ಹೆಚ್ಚು ಕಾರ್ಮಿಕರು ಮಕ್ಕಳೊಂದಿಗೆ ಊಟ ಇಲ್ಲದೇ ತಡರಾತ್ರಿವರೆಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಡಿವೈಎಸ್‌ಪಿ ರಘುಕುಮಾರ್ ಕಾರ್ಮಿಕರಿಗೆ ಊಟವನ್ನು ಕೊಡಿಸೋ ಮೂಲಕ ಮಾನವೀಯತೆ ಮೆರೆದಿದ್ದಾರೆ, ಜೊತೆಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದರು.