Asianet Suvarna News Asianet Suvarna News

ಸಿದ್ದರಾಮಯ್ಯ ಯೋಜನೆಗೆ ಬಿಎಸ್‌ವೈ ಬ್ರೇಕ್; ಕುರಿ ಸಾಕುವವರು ಗರಂ

ಸತ್ತ ಕುರಿಗೆ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಾಗಲಕೋಟೆ ನವನಗರದ ಜಿಲ್ಲಾಡಳಿತ ಭವನದ ಎದುರು ಕುರಿಗಾಹಿಗಳು ಪ್ರತಿಭಟನೆ ನಡೆಸಿದ್ದಾರೆ. 

Nov 26, 2020, 4:49 PM IST

ಬಾಗಲಕೋಟೆ (ನ. 26): ಸತ್ತ ಕುರಿಗೆ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನವನಗರದ ಜಿಲ್ಲಾಡಳಿತ ಭವನದ ಎದುರು ಕುರಿಗಾಹಿಗಳು ಪ್ರತಿಭಟನೆ ನಡೆಸಿದ್ದಾರೆ. 

ಸಿಎಂ ಬದಲಾವಣೆ ವಿಚಾರ : 'ಸಿದ್ದರಾಮಯ್ಯನವರು ನಿಮಗೆ ಕನಸು ಯಾವಾಗ ಬಿದ್ದಿತ್ತು'?

ರಾಜ್ಯ ಸಕಾ೯ರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ ಯೋಜನೆಗಳನ್ನ ಇಂದಿನ ಸಿಎಂ ಯಡಿಯೂರಪ್ಪ ಸ್ಥಗಿತಗೊಳಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಬೇಕಾದ್ರೆ ಅಭಿವೃದ್ಧಿ ನಿಗಮ ಮಾಡ್ತೀರಿ, ಕುರಿಗಾಹಿಗಳಿಗೆ ಕೊಡೋಕೆ ಪರಿಹಾರ ಯಾಕಿಲ್ಲವೆಂದು ಪ್ರತಿಭಟನಾಕಾರರ ಪ್ರಶ್ನಿಸಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಮನವಿಯನ್ನೂ ಸಲ್ಲಿಸಿದ್ದಾರೆ.