ಹುನಗುಂದ: ಮಳೆ ಬಂದ್ರೂ ಕಷ್ಟ, ಬಾರದಿದ್ದರೂ ಕಷ್ಟ, ಕಣ್ಣೀರಲ್ಲಿ ಕೈತೊಳೆಯುತ್ತಿರುವ ಹಿರಿಯ ಜೀವಗಳು..!
ವೃದ್ಧೆಯರ ಬೆನ್ನಿಗೆ ನಿಂತ ಏಷ್ಯಾನೆಟ್ ಸುವರ್ಣ ನ್ಯೂಸ್| ಕಳೆದ ವರ್ಷ ಸುರಿದ ಭಾರೀ ಮಳೆಗೆ ಬಿದ್ದ ಮನೆ| ಬದುಕಿನ ಜಟಕಾ ಬಂಡಿ ಸಾಗಿಸಲು ಪಟಬಾರದ ಕಷ್ಟ ಪಡುತ್ತಿರುವ ಹಿರಿಯ ಜೀವಗಳು| ಬಾಗಲಕೋಟೆ ಜಿಲ್ಲೆಯ ಹುನಗುಂದ ನಗರದಲ್ಲಿ ನಡೆದ ಘಟನೆ|
ಬಾಗಲಕೋಟೆ(ಫೆ.17): ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ ವರ್ಷ ಸುರಿದ ಭಾರೀ ಮಳೆ ಮನೆಯ ಛಾವಣಿ ಸಂಪೂರ್ಣವಾಗಿ ಬಿದ್ದುಹೋಗಿದೆ. ಮನೆ ಬಿದ್ದು ಹೋಗಿ ಒಂದು ವರ್ಷವಾಗುತ್ತಾ ಬಂದರೂ ಕೂಡ ಇನ್ನೂ ಮನೆ ರಿಪೇರಿ ಆಗಿಲ್ಲ. ಈ ಘಟನೆ ನಡೆದಿರೋದು ಜಿಲ್ಲೆಯ ಹುನಗುಂದ ನಗರದ ಅಂಬೇಡ್ಕರ್ ನಗರದಲ್ಲಿ. ಆಸರೆಯಾಗಿದ್ದ ಇದ್ದ ಮನೆ ಬಿದ್ದಿದ್ದರಿಂದ ವೃದ್ಧ ಸಹೋದರಿಯರಿಗೆ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.
ಬಿಗ್ 3 ಇಂಪ್ಯಾಕ್ಟ್: ಕಲಬುರಗಿ ಡೇಂಜರ್ ಟ್ಯಾಂಕ್, ಜನರ ಸಂಕಷ್ಟಕ್ಕೆ ಸಿಕ್ತು ಮುಕ್ತಿ..!
ಇವರಿಗೆ ಮನೆನೂ ಇಲ್ಲ, ಸಂಬಂಧಿಕರೂ ಇಲ್ಲ. ಹೀಗಾಗಿ ಬದುಕಿನ ಜಟಕಾ ಬಂಡಿ ಸಾಗಿಸಲು ಹಿರಿಯ ಜೀವಗಳು ಪಟಬಾರದ ಕಷ್ಟಗಳನ್ನ ಪಡುತ್ತಿವೆ. ಇದೇ ಬಿದ್ದ ಮನೆಯಲ್ಲಿಯೇ ಸಾಬವ್ವ ಕಲಾಲ್ ಹಾಗೂ ಗಂಗವ್ವ ಕಲಾಲ್ ಜೀವನ ಸಾಗಿಸುತ್ತಿದ್ದಾರೆ. ನಮ್ಮ ಕಷ್ಟಕ್ಕೆ ಯಾರೂ ಸ್ಪಂದಿಸುತ್ತಿಲ್ಲ ಎಂದು ವೃದ್ಧ ಸಹೋದರು ಸಹಾಯಕ್ಕಾಗಿ ಅಂಗಲಾಚಿದ್ದಾರೆ.