ಮಳೆಗೆ ಕುಸಿದ ಕನಸಿನ ಮನೆ: ದುಡಿಯಲು ಶಕ್ತಿಯಿಲ್ಲ ಸಹಾಯಕ್ಕಾಗಿ ಅಂಗಲಾಚಿದ ವೃದ್ಧ ದಂಪತಿ

ಭೀಕರ ಪ್ರವಾಹಕ್ಕೆ ಕಂಗಾಲಾದ ವೃದ್ಧ ದಂಪತಿ| ಬಾಗಲಕೋಟೆ ಜಿಲ್ಲೆಯ ಜಗದಾಳ ಗ್ರಾಮದಲ್ಲಿ ನಡೆದ ಘಟನೆ| ಬಿದ್ದ ಮನೆಯನ್ನೇ ನೋಡುತ್ತಾ ಕಣ್ಣೀರು ಹಾಕುತ್ತಿದ್ದಾರೆ ವೃದ್ಧ ದಂಪತಿ| ನಿರಂತರ ಮಳೆಗೆ ಜಿಲ್ಲಾದ್ಯಂತ ಭಾರೀ ಪ್ರಮಾಣದಲ್ಲಿ ನಷ್ಟ| 

First Published Oct 18, 2020, 12:36 PM IST | Last Updated Oct 18, 2020, 12:36 PM IST

ಬಾಗಲಕೋಟೆ(ಅ.18): ಭೀಕರ ಪ್ರವಾಹಕ್ಕೆ ವೃದ್ಧ ದಂಪತಿ ಕಂಗಾಲಾದ ಘಟನೆ ಜಿಲ್ಲೆಯ ಜಗದಾಳ ಗ್ರಾಮದಲ್ಲಿ ನಡೆದಿದೆ. ಪ್ರವಾಹಕ್ಕೆ ಮನೆ ಬಿದ್ದಿದೆ, ಹೀಗಾಗಿ ಬಿದ್ದ ಮನೆಯನ್ನೇ ನೋಡುತ್ತಾ ಮಹಾಂತಯ್ಯ, ಚೆನ್ನಮ್ಮ ವೃದ್ಧ ದಂಪತಿ ಕಣ್ಣೀರು ಹಾಕುತ್ತಿದ್ದಾರೆ. ಮಕ್ಕಳು ಇಲ್ಲ, ಮನೆಯೂ ಇಲ್ಲದೆ ವೃದ್ಧ ದಂಪತಿ ಅತಂತ್ರ ಸ್ಥಿತಿಯಲ್ಲಿದ್ದಾರೆ.

ಭೀಮಾ ನದಿ ಪ್ರವಾಹಕ್ಕೆ ನಲುಗಿದ ಉತ್ತರ ಕರ್ನಾಟಕ: ಸಂತ್ರಸ್ತರ ರಕ್ಷಣೆಗೆ ಅರೆಸೇನಾ ಪಡೆ

ಪ್ರವಾಹಕ್ಕೆ ಮನೆ ಕುಸಿದು ಬಿದ್ದಿದೆ, ಹೀಗಾಗಿ ಸಹಾಯಕ್ಕಾಗಿ ವೃದ್ಧ ದಂಪತಿ ಅಂಗಲಾಚಿದ್ದಾರೆ. ಕಳೆದೊಂದು ವಾರದಿಂದ ಸುರಿದ ನಿರಂತರ ಮಳೆಗೆ ಜಿಲ್ಲಾದ್ಯಂತ ಭಾರೀ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.
 

Video Top Stories