Asianet Suvarna News Asianet Suvarna News

Republic Day 2022: ಬಾಗಲಕೋಟೆಯ ಇಲಕಲ್ ಸೀರೆ, ಗುಳೇದಗುಡ್ಡದ ಖಣಕ್ಕೆ ದೆಹಲಿ ಪ್ರದರ್ಶನದ ಯೋಗ!

*ಗಣರಾಜ್ಯೋತ್ಸವಕ್ಕೆ ಆಯ್ಕೆಯಾದ ಬಾಗಲಕೋಟೆ ಜಿಲ್ಲೆಯ ಇಲಕಲ್ ಸೀರೆ & ಗುಳೇದಗುಡ್ಡದ ಖಣ
*ಬಾಗಲಕೋಟೆ ಜಿಲ್ಲೆಯ ನೇಕಾರರಿಗೆ ಹೆಮ್ಮೆ ತಂದ ಇಲಕಲ್ ಸೀರೆ & ಗುಳೇದಗುಡ್ಡದ ಖಣ
*ರಾಜ್ಯದಿಂದ ಆಯ್ಕೆಯಾದ 16 ಕರವಸ್ತುಗಳ ಪೈಕಿ ಇಲಕಲ್ ಸೀರೆ & ಗುಳೇದಗುಡ್ಡ ಖಣಕ್ಕೆ ಯೋಗ
*ಹಲವು ವರ್ಷಗಳಿಂದ ಅಸ್ಥಿತ್ವ ಕಳೆದುಕೊಳ್ಳುತ್ತಿದ್ದ ಗುಳೇದಗುಡ್ಡ ಖಣಕ್ಕೆ ದೆಹಲಿ ಪ್ರದರ್ಶನದ ಯೋಗ
*ಸಂತಸದ ಮಧ್ಯೆ ವ್ಯಾಪಾರ ಉತ್ತೇಜನಕ್ಕೆ ಕ್ರಮಕೈಗೊಳ್ಳುವಂತೆ ಮನವಿ ಮಾಡುತ್ತಿರೋ ನೇಕಾರರು

ಬಾಗಲಕೋಟೆ (ಜ. 22): ನೂರಾರು ವರ್ಷಗಳ ಇತಿಹಾಸ ಹೊಂದಿರೋ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಉತ್ತರ ಕರ್ನಾಟಕದ ಸಾಂಪ್ರದಾಯಿಕ ಇಲಕಲ್ ಸೀರೆ (Ilkal Saree) ಮತ್ತು ಗುಳೇದಗುಡ್ಡ ಖಣಕ್ಕೆ ( Guledgudda Khana) ಇದೀಗ ದೆಹಲಿಯ ಅಂಗಳದಲ್ಲಿ ಕಂಗೊಳಿಸುವ ಯೋಗ ಕೂಡಿ ಬಂದಿದೆ. ಹೌದು. ಈ ಬಾರಿಯ ದೆಹಲಿ ಗಣರಾಜ್ಯೋತ್ಸವಕ್ಕೆ ರಾಜ್ಯದಿಂದ ಪ್ರದರ್ಶನಗೊಳ್ಳಲು ಇಲಕಲ್ ಸೀರೆ ಮತ್ತು ಗುಳೇದುಗಡ್ಡ ಖಣ ಆಯ್ಕೆಯಾಗಿವೆ. ಇದು ನೇಕಾರರ ಅತೀವ ಹರ್ಷಕ್ಕೆ ಕಾರಣವಾಗಿದೆ. 

ಇದನ್ನೂ ಓದಿ: Republic Day Karnataka Tableau: ಈ ಬಾರಿ ಸ್ತಬ್ಧಚಿತ್ರದಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ ಚಿತ್ರಣ!

 ಹೀಗೆ ಇಲಕಲ್ ಸೀರೆಯನ್ನ ನೇಯುತ್ತಿರೋ ಮಹಿಳೆಯರು, ನೇಕಾರರ ಮಗ್ಗಗಳಲ್ಲಿ ಅರಳುತ್ತಿರೋ ಗುಳೇದಗುಡ್ಡದ ಖಣ, ಈ ಬಾರಿ ದೆಹಲಿ ಗಣರಾಜ್ಯೋತ್ಸವ ಕರಕುಶಲ ಪ್ರದರ್ಶನಕ್ಕೆ ಸಜ್ಜಾಗಿರೋ ಸಾಂಪ್ರದಾಯಿಕ ಇಲಕಲ್ ಸೀರೆ ಮತ್ತು ಗುಳೇದಗುಡ್ಡ ಖಣ. ಅಂದಹಾಗೆ ಇಂತಹವೊಂದು ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆಯಲ್ಲಿ. ಹೌದು. ರಾಜ್ಯದಲ್ಲಿ ಅತಿಹೆಚ್ಚು ನೇಕಾರರು ಇರುವ ಜಿಲ್ಲೆ ಎಂದು ಖ್ಯಾತಿ ಪಡೆದಿರುವ ಬಾಗಲಕೋಟೆ ಜಿಲ್ಲೆಯ ಇಲಕಲ್ ಸೀರೆ ಮತ್ತು ಗುಳೇದಗುಡ್ಡ ಖಣ ಇದೀಗ ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯಲಿರೋ ಈ ಬಾರಿಯ ಗಣರಾಜ್ಯೋತ್ಸವವ ಕರಕುಶಲ ಪ್ರದರ್ಶನಕ್ಕೆ ಆಯ್ಕೆಯಾಗಿವೆ. ರಾಜ್ಯದಿಂದ ಒಟ್ಟು 16 ಕರಕುಶಲ ವಸ್ತುಗಳು ಪ್ರದರ್ಶನಕ್ಕೆ ಆಯ್ಕೆಯಾಗಿ ಸಿದ್ದತೆ ನಡೆದಿರೋ ಬೆನ್ನಲ್ಲೆ ಜಿಲ್ಲೆಯಿಂದ ಇಲಕಲ್ ಸೀರೆ ಮತ್ತು ಗುಳೇದಗುಡ್ಡ ಖಣಗಳು ಸಹ ಆಯ್ಕೆಯಾಗಿವೆ. ಈ ಕುರಿತ ವರದಿ ಇಲ್ಲಿದೆ.̆

Video Top Stories