ಕ್ರೀಡಾ ಅಧಿಕಾರಿಗಳ ಎಡವಟ್ಟಿಗೆ ಅಥ್ಲೇಟಿಕ್ಸ್​ ಕಂಗಾಲು: ವರದಿ ನೋಡಿದ ಕ್ರೀಡಾ ಸಚಿವ ನಾಗೇಂದ್ರ ಅಲರ್ಟ್​!

ಅವರೆಲ್ಲ ದೇಶಕ್ಕೆ ಹಾಗೂ ರಾಜ್ಯಕ್ಕೆ ಕೀರ್ತಿ ತರೋಕೆ ಹೊರಟವರು. ಆದ್ರೆ, ನಮ್ಮ ಅಧಿಕಾರಿಗಳು, ಜನಪ್ರತಿನಿಧಿಗಳ ಉಡಾಫೆಯಿಂದ ಅವರ ಕನಸಿಗೆ ಸಹಕಾರ ಕೊಡಬೇಕಿದ್ದವರು ನೆಗ್ಲೇಟ್ ಮಾಡ್ತಿದ್ರು. ಅವರ ಪರವಾಗಿ ಬಿಗ್​3 ನಿಂತಿತ್ತು. ಮುಂದೇನಾಯ್ತು ಗೊತ್ತಾ? ಈ ಸ್ಪೆಷಲ್ ರಿಪೋರ್ಟ್ ನೋಡಿ.
 

First Published Aug 7, 2023, 1:34 PM IST | Last Updated Aug 7, 2023, 1:34 PM IST

ವಿಜಯಪುರದ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಹೆಸ್ರಲ್ಲಿರೋ ಭವ್ಯವಾದ ಜಿಲ್ಲಾ ಕ್ರೀಡಾಂಗಣವನ್ನ ಇಲ್ಲಿನ ಕ್ರೀಡಾ ಅಧಿಕಾರಿಗಳು ಕತ್ತಲಲ್ಲಿ  ಮುಳುಗಿಸಿ ಬಿಟ್ಟಿದ್ರು. ನಿತ್ಯ ಸಂಜೆ ಮೇಲೆ ಪ್ರಾಕ್ಟಿಸ್‌​​​​​ಗೆ ಬರೋ ಅಥ್ಲೆಟಿಕ್ಸ್‌​​​​ಗಳಿಗೆ(Athletics) ಲೈಟ್​ ವ್ಯವಸ್ಥೆ ಇಲ್ದೇ ಕತ್ತ ಲೆಯಲ್ಲಿ ಮೊಬೈಲ್‌ ಟಾರ್ಚ್‌ ಹಿಡಿದುಕೊಂಡು ರನ್ನಿಂಗ್‌ ಪ್ರಾಕ್ಟಿಸ್‌(practice) ಮಾಡ್ತಿದ್ರು. ಈ ಬಗ್ಗೆ ಬಿಗ್​​3ಯಲ್ಲಿ ಗರಂ ಆಗಿ ವರದಿ ಪ್ರಸಾರ ಮಾಡಿದ್ವಿ. ಬಿಗ್​3ಯಲ್ಲಿ ವರದಿ ಪ್ರಸಾರ ಆಗ್ತಿದ್ದಂತೆ ಮಹಾ ನಗರ ಪಾಲಿಕೆ ಆಯುಕ್ತರ ಬದ್ರುದ್ದೀನ್ ಸೌದಾಗರ್ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ರು. ಭೇಟಿ ನೀಡಿ ಮಾಸ್ಕ್​​​ ಲೈಟ್(Mask light)​ ಬಗ್ಗೆ ಪರಿಶೀಲನೆ ನಡೆಸಿದ್ರು. ಆದಷ್ಟು ಬೇಗ ಅಳವಡಿಸೋ ಭರವಸೆ ನೀಡಿದ್ರು.ಈ ಬಗ್ಗೆ ಬಿಗ್3 ಒಂದು ಕಣ್ಣಿಟ್ಟಿತ್ತು. ಕ್ರೀಡಾಂಗಣದ ಮಾಸ್ಕ್​ ಲೈಟ್ ಸಮಸ್ಯೆ ಬಗ್ಗೆ ಬಿಗ್​3ಯಲ್ಲಿ ವರದಿ ಪ್ರಸಾರದ ಮಾಹಿತಿ ಪಡೆದ ಕ್ರೀಡಾ ಸಚಿವ ನಾಗೇಂದ್ರ (Minister Nagendra)ಅಧಿಕಾರಿಗಳಿಗೆ ಸರಿ ಪಡಿಸುವಂತೆ ಸೂಚನೆ ನೀಡಿದ್ರು. ತಕ್ಷಣವೇ ಎಚ್ಚೆತ್ತ ಕ್ರೀಡಾಧಿಕಾರಿ ಜಿ ಎಸ್ ಲೋಣಿ ಹಾಗೂ ಪಾಲಿಕೆ ಕಮೀಷನರ್ ಬದ್ರುದ್ದೀನ್ ಸೌದಾಗರ್ ಸಿಬ್ಬಂದಿಗಳಿಗೆ ಕಳುಹಿಸಿ ಫಟಾಫಟ್ ಹೊಸ 8 ಎಲ್​​ಇಡಿ ಫೋಕಸ್​​  ಲೈಟ್​ ಅಳವಡಿಕೆ ಮಾಡಿದ್ದಾರೆ. 

ಇದನ್ನೂ ವೀಕ್ಷಿಸಿ:  ತೂಕ ಇಳಿಸಿಕೊಂಡಿದ್ದೇ ವಿಜಯ್‌ ರಾಘವೇಂದ್ರ ಪತ್ನಿ ಸಾವಿಗೆ ಕಾರಣವಾಯ್ತಾ ?

Video Top Stories