ಮನೆ ಸುತ್ತ ಹುಳುವಿನ ರಾಶಿ: ಕೆಟ್ಟವಾಸನೆ

  • ಉಡುಪಿಯ ಈ ಊರ ತುಂಬಾ ಬಸವನ ಹುಳುವಿನ ಕಾಟ
  • ಮನೆ ಅಂಗಳ ಹಿತ್ತಲು, ಮರಗಿಡ, ಬಳ್ಳಿ ತುಂಬಾ ಹುಳ
  • ಹುಳುವಿನಿಂದ ಮುಕ್ತಿ ಕೊಡಿ ದೇವಿನಗರ ನಿವಾಸಿಗಳ ಅಳಲು
  • ಪ್ರತಿದಿನ ಮನೆ ಸುತ್ತಲೂ ಹುಳುಗಳ ರಾಶಿ, ಕೆಟ್ಟವಾಸನೆ  
First Published Oct 21, 2021, 3:11 PM IST | Last Updated Oct 21, 2021, 3:12 PM IST

ಉಡುಪಿ(ಅ.21): ಹಾಲಿವುಡ್ ಸಿನಿಮಾಗಳಲ್ಲಿ ರಾಶಿರಾಶಿ ಹುಳುಗಳು ಊರಿಗೆ ದಾಳಿಯಿಡುವ ಭಯಾನಕ ದೃಶ್ಯಗಳನ್ನು ನೋಡಿದ್ದೇವೆ. ಉಡುಪಿ(Udupi) ಜಿಲ್ಲೆಯ ಪರ್ಕಳದ ದೇವಿ ನಗರದಲ್ಲಿ ಹೆಚ್ಚುಕಮ್ಮಿ ಅದೇ ಪರಿಸ್ಥಿತಿ ಉಂಟಾಗಿದೆ. ಈ ಊರಿನ ಬೀದಿ ಬೀದಿಯಲ್ಲೂ ಶಂಕದ ಹುಳುವಿನ ರಾಶಿರಾಶಿ ಕಾಣಸಿಗುತ್ತಿದೆ. ಕಳೆದ ಮೂರು ವರ್ಷಗಳಿಂದ ಮಳೆಗಾಲದಲ್ಲಿ ಹುಳುವಿನ ಬಾಧೆ ವಿಪರೀತವಾಗಿದ್ದರೂ, ಈ ಬಾರಿಯಷ್ಟು ಹುಳುಗಳು ಯಾವತ್ತೂ ದಾಳಿ ಇಟ್ಟಿರಲಿಲ್ಲ.

ದಿವಾಳಿಯಾಗ್ತಿದ್ಯಾ BMTC?: ಸವದಿ ಅವಧಿಯಲ್ಲೇ ಈವರೆಗಿನ ಅತ್ಯಧಿಕ ಸಾಲ!

ನಿಶಾಚರಿ ಗಳಾದ ಈ ಹುಳುಗಳು ಹಗಲೆಲ್ಲಾ ಗೋಡೆಗಂಟಿ ಮಲಗಿಬಿಡುತ್ತವೆ; ರಾತ್ರಿಯಾದರೆ ಸಾಕು ಆಕ್ಟಿವ್ ಆಗ್ತಾವೆ. ಮುದುಡಿ ಮಲಗಿದರೆ ಒಂದಿಂಚು ಅಗಲದ ಈ ಹುಳು.. ಎಳೆದಷ್ಟು ಉದ್ದಕ್ಕೆ ಬಿಚ್ಚಿಕೊಳ್ಳುತ್ತದೆ. ಮೈಯೆಲ್ಲಾ ಅಂಟು,  ಕೆಟ್ಟವಾಸನೆ ಪ್ರತಿದಿನ ಮನೆ ಸುತ್ತಲೂ ಹುಳುಗಳ ರಾಶಿ ಕಂಡು ಜನ ರೋಸಿ ಹೋಗಿದ್ದಾರೆ. ಮಳೆಗಾಲದ ತೇವಾಂಶಕ್ಕೆ ಮೇಲಕ್ಕೆ ಬರುವ ಹುಳುಗಳು ಉಳಿದ ಕಾಲದಲ್ಲಿ ಭೂಮಿಯಡಿ ಹುದುಗಿರುತ್ತಂತೆ.