Asianet Suvarna News Asianet Suvarna News

BIG3ದನದ ಕೊಟ್ಟಿಗೆಯೇ ಅಂಗನವಾಡಿ ಕೇಂದ್ರ: ಮಕ್ಕಳಿಗೆ ನಿತ್ಯವೂ ನರಕಯಾತನೆ

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದೋಣಿಗಾಲ್ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಸ್ಥಿತಿ ನಿತ್ಯವೂ ನರಕ ಎಂಬಂತಾಗಿದೆ.
 

ಒಂದು ಕಡೆ ಜಾನುವಾರುಗಳು, ಅಲ್ಲಿಯೇ ಪಾಠ ಕಲಿಯುತ್ತಿರೋ ಮುಗ್ದ ಮಕ್ಕಳು. ಇದು ದೋಣಿಗಾಲ್ ಗ್ರಾಮದ ಅಂಗನವಾಡಿ ಕೇಂದ್ರದ ಸ್ಥಿತಿ. ಬಡವರ ಮಕ್ಕಳು ಅನಿರ್ವಾರ್ಯವಾಗಿ ಈ ಅಂಗನವಾಡಿ ಕೇಂದ್ರಕ್ಕೆ ಬಂದು ಪಾಠ ಕಲಿಯುತ್ತಿದ್ದಾರೆ. ಈ ಕೇಂದ್ರದಲ್ಲಿ 13ಕ್ಕೂ ಅಧಿಕ ಮಕ್ಕಳು ದಾಖಲಾಗಿದ್ದಾರೆ. ದನಗಳ ಪಕ್ಕ ಪಾಠ ಕಲಿಸೋ ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಕಳಿಸಲು ಇನ್ನೂ ಕೆಲ ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಡಿಪಿಒ ಗಮನಕ್ಕೆ  ಹಾಗೂ ಬಿಇಒ ಗಮನಕ್ಕೂ ತರಲಾಗಿದೆ. ಆದ್ರೆ ದೋಣಿಗಾಲ್ ಗ್ರಾಮದಲ್ಲಿ ಒಂದು ಬಾಡಿಗೆ ಮನೆಯಲ್ಲಿ ಅಂಗನವಾಡಿ ಕೇಂದ್ರ ಶಿಫ್ಟ್ ಮಾಡಿಕೊಳ್ಳಿ ಎಂದು ಸಿಡಿಪಿಒ ಸೂಚಿಸಿದ್ದರು. ಹೀಗಾಗಿ ಸದ್ಯಕ್ಕೆ ಕಾಲಿ ಇರೋ ಈ ಕೊಟ್ಟಿಗೆ ಮನೆಯನ್ನೇ  ತಿಂಗಳಿಗೆ 500 ರೂಪಾಯಿ ಬಾಡಿಗೆ ನೀಡಿ ಅಂಗನವಾಡಿ ಕೇಂದ್ರವನ್ನಾಗಿ ನಡೆಸಲಾಗುತ್ತಿದೆ. ಆದಷ್ಟು ಬೇಗ ಈ ಮಕ್ಕಳಿಗೆ ಒಂದೊಳ್ಳೆ ವ್ಯವಸ್ಥೆ ಕಲ್ಪಿಸಿ ಕೊಡಿ ಅನ್ನೋದು ಬಿಗ್-3 ಆಗ್ರಹವಾಗಿದೆ.

ಗದಗ ಡಾರ್ಕ್ ಮಾರ್ಕೆಟ್‌ಗೆ ಕೊನೆಗೂ ಬಂತು ಬೆಳಕು: ಇದು ಬಿಗ್-3 ಫಲಶ್ರುತಿ