ಸೋಮಣ್ಣ ಮಹಿಳೆ ಕೆನ್ನೆಗೆ ಸಿಟ್ಟಿನಿಂದ ಹೊಡೆದಿಲ್ಲ, ಇದು ಷಡ್ಯಂತ್ರ: ಅಮ್ಮನಪುರ ಮಲ್ಲೇಶ್
ಸಚಿವ ವಿ. ಸೋಮಣ್ಣ ಮಹಿಳೆಗೆ ಸಿಟ್ಟಿನಿಂದ ಕೆನ್ನೆಗೆ ಹೊಡೆದಿಲ್ಲ, ಅವರ ಹೆಸರಿಗೆ ಮಸಿ ಬಳಿಯುವ ಷಡ್ಯಂತ್ರ ನಡೆದಿದೆ ಎಂದು ಅಮ್ಮನಪುರ ಮಲ್ಲೇಶ್ ಆರೋಪಿಸಿದ್ದಾರೆ.
ಘಟನೆ ಕುರಿತು ಚಾಮರಾಜನಗರದ ಬಿಜೆಪಿ ಮುಖಂಡ ಅಮ್ಮನಪುರ ಮಲ್ಲೇಶ್ ಮಾತನಾಡಿದ್ದು, ಸಚಿವ ವಿ. ಸೋಮಣ್ಣಗೆ ಯಾರ ಮೇಲೂ ದ್ವೇಷವಿಲ್ಲ, ಮಹಿಳೆ ಪದೇ ಪದೇ ವೇದಿಕೆ ಮೇಲೆ ಹೋಗಿ ಕಾಲಿಗೆ ಬೀಳುತ್ತಿದ್ದರು. ಆಕೆಯ ಆರ್ತನಾದ ಕೇಳಲಾರದೆ ಸಾತ್ವಿಕ ಸಿಟ್ಟಿನಿಂದ ಆಕೆಯ ಕೆನ್ನೆ ಸವರಿದ್ದಾರೆ ಅಷ್ಟೇ, ಆದರೆ ಇದನ್ನೇ ತಿರುಚಿ ಕೆನ್ನೆಗೆ ಹೊಡೆದರು ಎಂದು ಬಿಂಬಿಸಲಾಗುತ್ತಿದೆ ಎಂದರು. ಜತೆಗೆ ಸಚಿವ ಸೋಮಣ್ಣ ಹೆಸರಿಗೆ ಕಳಂಕ ತರಲು ಕೆಆರ್‌ಐಡಿಎಲ್ ಅಧ್ಯಕ್ಷ ರುದ್ರೇಶ್ ಒಳಸಂಚು ನಡೆಸಿದ್ದಾರೆ. ರುದ್ರೇಶ್ ಒಬ್ಬ ಕಾಂಗ್ರೆಸ್ ಏಜೆಂಟ್, ಗುಂಡ್ಲುಪೇಟೆಯಲ್ಲಿ ನಡೆದ ಘಟನೆಯಲ್ಲಿ ರುದ್ರೇಶ್ ಕೈವಾಡವಿದೆ. ಸೋಮಣ್ಣ ಹೆಸರಿಗೆ ಕಳಂಕ ತರಲು ರುದ್ರೇಶ್ ಯತ್ನಿಸುತ್ತಿದ್ದಾರೆ. ಕೂಡಲೇ ಆತನನ್ನು ಕೆಆರ್‌ಐಡಿಎಲ್ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.