ರಾಯಚೂರಿಗೆ ಹೆಮ್ಮಾರಿ ಬಿಸಿ: ಮಸ್ಕಿ ಪುರಸಭೆ ಸದಸ್ಯನಿಗೆ ಅಂಟಿತಾ ಮಹಾಮಾರಿ ಕೊರೋನಾ..?
ಕಾರ್ಪೋರೇಟರ್ ಇಮ್ರಾನ್ ಬಳಿಕ ರಾಯಚೂರು ಜಿಲ್ಲೆಯ ಮಸ್ಕಿ ಪುರಸಭೆ ಸದಸ್ಯನಿಗೆ ಕೊರೋನಾ ಸೋಂಕು|ಮಸ್ಕಿ ಪಟ್ಟಣದ ಬ್ಯಾಂಕ್ ಉದ್ಯೋಗಿ(ಪಿ. 2254) ಸಂಪರ್ಕದಿಂದ ಜನಪ್ರತಿನಿಧಿಗೆ ಸೋಂಕು| ಜನಪ್ರತಿನಿಧಿ ವಾಸವಿದ್ದ ಪ್ರದೇಶವನ್ನ ಸೀಲ್‌ಡೌನ್|
ರಾಯಚೂರು(ಮೇ.31): ರಾಜ್ಯದಲ್ಲಿ ಮತ್ತೊಬ್ಬ ಜನಪ್ರತಿನಿಧಿಗೆ ಕೊರೋನಾ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ. ಕಾರ್ಪೋರೇಟರ್ ಇಮ್ರಾನ್ ಬಳಿಕ ರಾಯಚೂರು ಜಿಲ್ಲೆಯ ಮಸ್ಕಿ ಪುರಸಭೆ ಸದಸ್ಯನಿಗೆ ಕೊರೋನಾ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿಂದು ಮೂರು ಸಾವಿರದ ಗಡಿ ದಾಟುತ್ತಾ ಕೊರೋನಾ?
ಮಸ್ಕಿ ಪಟ್ಟಣದ ಬ್ಯಾಂಕ್ ಉದ್ಯೋಗಿ(ಪಿ. 2254) ಸಂಪರ್ಕದಿಂದ ಜನಪ್ರತಿನಿಧಿಗೆ ಸೋಂಕು ಅಂಟಿದೆ. ಪಟ್ಟಣದಲ್ಲಿ ಜನಪ್ರತಿನಿಧಿ ವಾಸವಿದ್ದ ಪ್ರದೇಶವನ್ನ ಸೀಲ್‌ಡೌನ್ ಮಾಡಲಾಗಿದೆ. ನಿನ್ನೆ ರಾತ್ರಿಯಿಂದಲೇ ಬಡಾವಾಣೆಯ ರಸ್ತೆಗಳು ಕಂಪ್ಲೀಟ್ ಬಂದ್ ಅಗಿವೆ. ಜನಪ್ರತಿನಿಧಿ ಸೇರಿ ಮೂವರಿಗೆ ಕೊರೋನಾ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ.