Asianet Suvarna News Asianet Suvarna News

ರಾಜ್ಯದಲ್ಲಿ ಮಾತ್ರವಲ್ಲ, ಅನ್ಯ ರಾಜ್ಯದಲ್ಲೂ ದರ್ಶನ್​ ದಬ್ಬಾಳಿಕೆ..? ಈ ಬಗ್ಗೆ ನಿರ್ಮಾಪಕ ಉಮಾಪತಿ ಹೇಳಿದ್ದೇನು?

ಕುಡಿದು ಬಿಟ್ರೆ ಸ್ಥಿಮಿತದಲ್ಲೇ ಇರಲ್ಲ. ಎಣ್ಣೆ ಏಟಲ್ಲಿ​ ಸಾಕಷ್ಟು ಗಲಾಟೆ ಮಾಡಿದ್ದಾರೆ ಎಂದು ನಿರ್ಮಾಪಕ ಉಮಾಪತಿ ಹೇಳಿದ್ದಾರೆ.
 

ರಾಜ್ಯದಲ್ಲಿ ಮಾತ್ರವಲ್ಲ, ಅನ್ಯ ರಾಜ್ಯದಲ್ಲೂ ನಟ ದರ್ಶನ್(Darshan)​ ದಬ್ಬಾಳಿಕೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಲಖನೌದಲ್ಲೂ ನಟ ದರ್ಶನ್‌ ಗಲಾಟೆ ಮಡಿಕೊಂಡಿದ್ದರು ಎನ್ನಲಾಗ್ತಿದೆ. ದರ್ಶನ್​ ಗಲಾಟೆಯಿಂದ ವ್ಯಕ್ತಿಯೊಬ್ಬ ಸಾಯಬೇಕಿತ್ತುಎಂದು ಹೇಳುವ ಮೂಲಕ ದರ್ಶನ್​​​ ಒಂದೊಂದೇ ಅವಾಂತರವನ್ನು ನಿರ್ಮಾಪಕ ಉಮಾಪತಿ(Producer Umapati) ಬಿಚ್ಚಿಟ್ಟಿದ್ದಾರೆ. ದರ್ಶನ್​ ಮಾಡಿದ ಗಲಾಟೆಗೆ ಲಖನೌದಲ್ಲಿ ನನಗೂ ಹೊಡೆಯೋಕೆ ಬಂದಿದ್ರು. ಮರು ದಿನ  ಮನೆಗೆ ಕರೆದು, ಊಟ ಹಾಕಿ ಸ್ವಾರಿ ಕೇಳಿದ್ರು. ಕುಡಿದು(Drink) ಬಿಟ್ರೆ ಸ್ಥಿಮಿತದಲ್ಲೇ ಇರಲ್ಲ. ಎಣ್ಣೆ ಏಟಲ್ಲಿ​ ಸಾಕಷ್ಟು ಗಲಾಟೆ ಮಾಡಿದ್ದಾರೆ. ಎಣ್ಣೆ ಕೊಡಿಸಿದ್ದು ಕಡಿಮೆಯಾಗಿದ್ದಕ್ಕೆ ರಾಬರ್ಟ್ ರಿಲೀಸ್​ ವೇಳೆ ತೊಂದರೆ ಮಾಡಿದ್ರು. ರಾಬರ್ಟ್ ಸಿನಿಮಾ ಶೂಟಿಂಗ್​ ವೇಳೆ ಲಖನೌದಲ್ಲಿ ನಡೆದಿದ್ದ ಗಲಾಟೆ ಬಗ್ಗೆ ಉಮಾಪತಿ ಮಾತನಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ನಿರ್ಮಾಪಕ ಉಮಾಪತಿಗೆ ತಗಡು ಎಂದಿದ್ದ ದರ್ಶನ್..! ಚಿತ್ರರಂಗ ಮೌನ ರಹಸ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್..!