ಸ್ವಾರ್ಥಬಿಡಿ!' ಆನಂದ ಸಿಂಗ್ ಕಾಲು ಮುಗಿದ ಹೋರಾಟಗಾರರು

ಸ್ವಾರ್ಥಕ್ಕಾಗಿ ಜಿಲ್ಲೆ ವಿಭಜನೆ ಮಾಡಬೇಡಿ| ವಿಭಜನೆಯಾದ್ರೇ ಬಳ್ಳಾರಿ ಮತ್ತೊಂದು ಬೆಳಗಾವಿ ಆಗ್ತದೆ| ಬಳ್ಳಾರಿ ವಿಭಜನೆ ಮಾಡಿದ್ರೇ ಆಂಧ್ರ ಪ್ರಭಾವ ಹೆಚ್ಚಾಗ್ತದೆ| ಬಳ್ಳಾರಿ ಹೆಸರು ಬದಲಾವಣೆ ಮಾಡಿ ವಿಜಯನಗರ ಎಂದು ಇಡಿ| ಆನಂದ ಸಿಂಗ್ ಕಾಲು ಮುಗಿದ ಹೋರಾಟಗಾರರು| 

First Published Dec 23, 2020, 3:25 PM IST | Last Updated Dec 23, 2020, 3:27 PM IST

ಬಳ್ಳಾರಿ(ಡಿ.23): ಜಿಲ್ಲೆಯನ್ನ ವಿಭಜನೆ ಮಾಡದಂತೆ ಬಳ್ಳಾರಿ ಅಖಂಡ ಜಿಲ್ಲೆ ಹೋರಾಟಗಾರರು ಜಿಲ್ಲಾ ಉಸ್ತುವಾರಿ ಸಚಿವ ಅನಂದ ಸಿಂಗ್‌ ಕಾರಿಗೆ ಮುತ್ತಿಗೆ ಹಾಕಿದ ಘಟನೆ ಇಂದು(ಬುಧವಾರ) ನಗರದಲ್ಲಿ ನಡೆದಿದೆ. ಈ ವೇಳೆ ಕಾರು ಇಳಿದು ಹೋರಾಟಗಾರರ ಜೊತೆಗೆ ರಸ್ತೆಯಲ್ಲಿ ಆನಂದ ಸಿಂಗ್ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವಿಭಜನೆ ಮಾಡೋಕೆ ಏನು ಕಾರಣ ಎಂದು ಹೋರಾಟಗಾರರ ಆನಂದ ಸಿಂಗ್ ವಿವರಣೆ ನೀಡಿದ್ದಾರೆ. 

'ಎಲ್ಲಾ ವಿಮಾನಗಳನ್ನ ನಿಷೇಧಿಸಿ, ವಿದೇಶದಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯ ಮಾಡಿ'

ವಿಭಜನೆ ಬೇಡ ಅನ್ನೋದಕ್ಕೆ ಮತ್ತು ಬೇಕು ಅನ್ನೋದಕ್ಕೆ ಸಚಿವರು ಹಾಗೂ ಹೋರಾಟಗಾಅರ ಮಧ್ಯೆ  ವಾಗ್ವಾದ ನಡೆದಿದೆ. ಸ್ವಾರ್ಥಕ್ಕಾಗಿ ಜಿಲ್ಲೆ ವಿಭಜನೆ ಮಾಡಬೇಡಿ. ವಿಭಜನೆಯಾದ್ರೇ ಬಳ್ಳಾರಿ ಮತ್ತೊಂದು ಬೆಳಗಾವಿ ಆಗುತ್ತದೆ. ಬಳ್ಳಾರಿ ವಿಭಜನೆ ಮಾಡಿದ್ರೇ ಆಂಧ್ರ ಪ್ರಭಾವ ಹೆಚ್ಚಾಗುತ್ತದೆ. ಬಳ್ಳಾರಿ ಹೆಸರು ಬದಲಾವಣೆ ಮಾಡಿ ವಿಜಯನಗರ ಎಂದು ಇಡಿ ಎಂದು ಹೋರಾಟಗಾರರು ಸಚಿವ ಆನಂದ ಸಿಂಗ್ ಕಾಲು ಮುಗಿದು ಬೇಡಿಕೊಂಡಿದ್ದಾರೆ. ಸ್ವಾರ್ಥಬಿಡಿ ಜಿಲ್ಲೆ ಉಳಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
 

Video Top Stories