ಲಾಕ್‌ಡೌನ್: 300ರಷ್ಟು ಪ್ರೀ ಸ್ಕೂಲ್ ಕ್ಲೋಸ್, ಇನ್ನು ಕೆಲವು ಮಾರಾಟಕ್ಕೆ..!
ಕೊರೋನಾ ವೈರಸ್ ತಡೆಯಲು ಮಾಡಿದ ಲಾಕ್‌ಡೌನ್‌ನಿಂದಾಗಿ ಕಟ್ಟಡದ ಬಾಡಿಗೆ ಕಟ್ಟೋಕೂ ಅಸಾಧ್ಯ ಎನ್ನುವಂತಹ ಪರಿಸ್ಥಿತಿ ಸೃಷ್ಟಿಯಾಗಿದ್ದು, ಈಗ ಪ್ರೀ ಸ್ಕೂಲ್‌ಗಳನ್ನೂ ಮಾರಾಟಕ್ಕಿಡಲಾಗಿದೆ.
ಬೆಂಗಳೂರು(ಮೇ 27): ಮಹಾಮಾರಿ ಅಬ್ಬರದಿಂದ ಎಲ್ಲವೂ ಬಂದ್ ಆಗಿದೆ. ಆರ್ಥಿಕತೆ, ಉದ್ಯಮ, ವ್ಯಾವಾರ ವಹಿವಾಟುಗಳಿಗೆ ಇನ್ನಿಲ್ಲದಷ್ಟು ಹೊಡೆತ ಬಿದ್ದಿದೆ. ಹಾಗೆಯೇ ಪ್ರಾಥಮಿಕ ಶಾಲೆಯೂ ಕೊರೋನಾ ಲಾಕ್‌ಡೌನ್‌ನಿಂದ ತತ್ತರಿಸಿದೆ.
ನಮ್ದು ಕೋಳಿ ಜಗಳ, ಮಂಡ್ಯದವ್ರಲ್ಲಾ, ಹಾಗೇ ಆಡ್ತೀವಿ : ನಾರಾಯಣ ಗೌಡ
ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಕೆಲಸ ಮಾಡಿ ನಿವೃತ್ತರಾದ ಶಿಕ್ಷಕರ ವೇತನವೂ ತಲುಪಿಲ್ಲ. ಪೂರ್ವ ಪ್ರಾಥಮಿಕ ಶಾಲೆಗಳ ನಿರ್ವಹಣೆಯಂತೂ ದುಸ್ತರವಾಗಿ ಬಿಟ್ಟಿದೆ. ನಿವೃತ್ತ ಶಿಕ್ಷಕರು ವೇತನಕ್ಕಾಗಿ ಶಿಕ್ಷಣ ಇಲಾಖೆಗೆ ಅಲೆಯುತ್ತಿದ್ದಾರೆ. ಕಟ್ಟಡದ ಬಾಡಿಗೆ ಕಟ್ಟೋಕೂ ಅಸಾಧ್ಯ ಎನ್ನುವಂತಹ ಪರಿಸ್ಥಿತಿ ಸೃಷ್ಟಿಯಾಗಿದ್ದು, ಈಗ ಪ್ರೀ ಸ್ಕೂಲ್‌ಗಳನ್ನೂ ಮಾರಾಟಕ್ಕಿಡಲಾಗಿದೆ.