Big 3: 8 ವರ್ಷದ ಸಮಸ್ಯೆಗೆ ಎರಡೇ ದಿನದಲ್ಲಿ ಪರಿಹಾರ: ಕಲಬುರಗಿಯ ರಾವೂರ ಗ್ರಾಮಕ್ಕೆ ವಿದ್ಯುತ್‌

ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು. ಸ್ಥಳಕ್ಕೆ ದೌಡಾಯಿಸಿ ಸಮಸ್ಯೆಯನ್ನ ಪರಿಹರಿಸಿದ ಅಧಿಕಾರಿಗಳು. 

First Published Aug 30, 2022, 1:26 PM IST | Last Updated Aug 30, 2022, 1:26 PM IST

ಕಲಬುರಗಿ(ಆ.30): ಕಳೆದ 8 ವರ್ಷಗಳಿಂದ ಇರುವ ಸಮಸ್ಯೆ ಬಗ್ಗೆ ಬಿಗ್‌ 3 ಯಲ್ಲಿ ವರದಿ ಪ್ರಸಾರವಾಗಿತ್ತು. ವರದಿ ಪ್ರಸಾರವಾದ ಬೆನ್ನಲ್ಲೇ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಸಮಸ್ಯೆಯನ್ನ ಪರಿಹರಿಸಿದ್ದಾರೆ. ಈ ಘಟನೆ ನಡೆದಿರೋದು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದಲ್ಲಿ. ಹೌದು, ರಾವೂರ ಗ್ರಾಮಕ್ಕೆ ವಿದ್ಯುತ್‌ ಕೊಡಿ ಅಂತ ಕಳೆದ ವರ್ಷಗಳಿಂದ ಗ್ರಾಮಸ್ಥರು ಅಂಗಲಾಚಿ ಬೇಡಿಕೊಂಡರೂ ಅಧಿಕಾರಿಗಳು ಮಾತ್ರ ಕ್ಯಾರೇ ಎಂದಿರಲಿಲ್ಲ. ಈ ಸಮಸ್ಯೆಯ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತಿದ್ದಾರೆ. 

ಕಗ್ಗತ್ತಲ ಕೂಪದಲ್ಲಿ ಕಲಬುರಗಿಯ ರಾವೂರ ಗ್ರಾಮ: Big 3 ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು