ಕಲಬುರಗಿ: ಕಾಲರಾಗೆ ಇಬ್ಬರು ಬಲಿ, 60ಕ್ಕೂ ಹೆಚ್ಚು ಜನರು ಅಸ್ವಸ್ಥ

*  ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ದಸ್ತಾಪುರ ಗ್ರಾಮದಲ್ಲಿ ನಡೆದ ಘಟನೆ
*  ದಸ್ತಾಪುರ ಗ್ರಾಮದಲ್ಲಿ ವಾಂತಿ, ಬೇಧಿ ಉಲ್ಬಣ
*  ಕಲುಷಿತ ನೀರು ಸೇವಿಸಿ 50ಕ್ಕೂ ಹೆಚ್ಚು ಮಂದಿಗೆ ವಾಂತಿ, ಬೇಧಿ 
 

First Published Sep 30, 2021, 2:01 PM IST | Last Updated Sep 30, 2021, 2:01 PM IST

ಕಲಬುರಗಿ(ಸೆ.30):  ಕಾಲರಾ ರೋಗದಿಂದ ಇಬ್ಬರು ಸಾವನ್ನಪ್ಪಿ, 60ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ದಸ್ತಾಪುರ ಗ್ರಾಮದಲ್ಲಿ ಇಂದು(ಗುರುವಾರ) ನಡೆದಿದೆ. ದಸ್ತಾಪುರ ಗ್ರಾಮದಲ್ಲಿ ವಾಂತಿ, ಬೇಧಿ ಉಲ್ಬಣಗೊಂಡಿದೆ. ಕಮಲಾಬಾಯಿ(55), ದ್ರೌಪದಿ (60) ಎಂಬುವರು ಕಾಲರಾಕ್ಕೆ ಬಲಿಯಾಗಿದ್ದಾರೆ. ಕಲುಷಿತ ನೀರು ಕುಡಿದು 50ಕ್ಕೂ ಹೆಚ್ಚು ಮಂದಿಗೆ ವಾಂತಿ, ಬೇಧಿ ಕಾಣಿಸಿಕೊಂಡಿದೆ. ಹೀಗಾಗಿ ಗ್ರಾಮದ ಜನತೆ ಆತಂಕದಲ್ಲಿದ್ದಾರೆ.

ಬೈಎಲೆಕ್ಷನ್ ಅಖಾಡ: ಹಾನಗಲ್‌ನಲ್ಲಿ ಬಿಜೆಪಿ ಟಿಕೆಟ್‌ ಯಾರಿಗೆ?
 

Video Top Stories