ಕುರಿ ಸಂತೆ ಶಿಫ್ಟ್‌: ಕೊಪ್ಪಳದ ಬೂದಗುಂಪಾದಲ್ಲಿ 144 ಸೆಕ್ಷನ್ ಜಾರಿ

ಬೂದಗುಂಪಾ ಗ್ರಾಮದಲ್ಲಿ ನಡೆಯತ್ತಿದ್ದ ಕುರಿ ಸಂತೆ ಕೂಕನಪಳ್ಳಿಗೆ ಸ್ಥಳಾಂತರ| ಸಂಸದ ಸಂಗಣ್ಣ ಕರಡಿ ಸ್ವಗ್ರಾಮ ಕೂಕನಪಳ್ಳಿಗೆ ಕುರಿ ಸಂತೆ ಶಿಫ್ಟ್‌| ಅಹಿತಕರ ಘಟನೆ ನಡೆಯದಂತೆ ಬೂದಗುಂಪಾ ಗ್ರಾಮದಲ್ಲಿ 144 ಸೆಕ್ಷನ್ ಜಾರಿ|

First Published Jan 24, 2020, 12:59 PM IST | Last Updated Jan 24, 2020, 12:59 PM IST

ಕೊಪ್ಪಳ(ಜ.24): ತಾಲೂಕಿನ ಬೂದಗುಂಪಾ ಗ್ರಾಮದಲ್ಲಿ ನಡೆಯತ್ತಿದ್ದ ಕುರಿ ಸಂತೆಯನ್ನು ಸಂಸದ ಸಂಗಣ್ಣ ಕರಡಿ ಸ್ವಗ್ರಾಮ ಕೂಕನಪಳ್ಳಿಗೆ ಶಿಫ್ಟ್‌ ಮಾಡಲಾಗಿದೆ. ಕುರಿ ಸಂತೆ ಶಿಫ್ಟ್‌ ಆದ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೂದಗುಂಪಾ ಗ್ರಾಮದಲ್ಲಿ ಜಿಲ್ಲಾಧಿಕಾರಿ 144 ಸೆಕ್ಷನ್ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ. 

ಸಂಸದ ಸಂಗಣ್ಣ ಕರಡಿ ಒತ್ತಡಕ್ಕೆ ಮಣಿದು ಕುರಿ ಸಂತೆಯನ್ನ ಕೂಕನಪಳ್ಳಿ ಗ್ರಾಮಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಬೂದಗುಂಪಾ ಗ್ರಾಮಸ್ಥರು ಆರೋಪಿಸಿದ್ದಾರೆ. 2014 ರ ಲೋಕಸಭಾ ಚುನಾವಣೆ ವೇಳೆ ಕೂಕನಪಳ್ಳಿ ಇಂದ ಬೂದಗುಂಪಾ ಗ್ರಾಮಕ್ಕೆ ಕುರಿ ಸಂತೆ‌ ಸ್ಥಳಾಂತರವಾಗಿತ್ತು. ಇದೀಗ ಬಿಜೆಪಿ ಅಧಿಕಾರಕ್ಕೆ ಬರುತ್ತಲೇ ಮತ್ತೆ ಕೂಕನಪಳ್ಳಿಗೆ ಕುರಿ ಸಂತೆ‌ ಶಿಫ್ಟ್‌ ಆಗಿದೆ.