ಹಾಸನದಲ್ಲಿ ಕೊರೋನಾ ವೈರಸ್ ಮೂಲವೇ ನಿಗೂಢ..!
ಆತಂಕಕಾರಿ ವಿಚಾರವೆಂದರೆ, ವೈರಸ್ ಮೂಲ ನಿಗೂಢವೆನಿಸಿದೆ. ಈ ಸೋಂಕು ಎಲ್ಲಿಂದ ಬಂತು ಎನ್ನುವುದೇ ಸದ್ಯಕ್ಕೀಗ ಯಕ್ಷಪ್ರಶ್ನೆಯಾಗಿದೆ. 13 ಸೋಂಕಿತರ ಪೈಕಿ 10 ಮಂದಿಗೆ ಸೋಂಕಿನ ಮೂಲ ಯಾವುದು ಎನ್ನುವುದು ಪತ್ತೆಯಾಗಿಲ್ಲ.
ಹಾಸನ(ಮೇ.28): ಕೊರೋನಾ ರಣಕೇಕೆ ದಿನೇ ದಿನೇ ಹಾಸನದಲ್ಲಿ ಹೆಚ್ಚುತ್ತಲೇ ಇದೆ. ಗುರುವಾರವಾದ ಇಂದು ಹೊಸದಾಗಿ ಹಾಸನದಲ್ಲಿ 13 ಕೊರೋನಾ ಕೇಸ್‌ಗಳು ಪತ್ತೆಯಾಗಿವೆ.
ಆದರೆ ಆತಂಕಕಾರಿ ವಿಚಾರವೆಂದರೆ, ವೈರಸ್ ಮೂಲ ನಿಗೂಢವೆನಿಸಿದೆ. ಈ ಸೋಂಕು ಎಲ್ಲಿಂದ ಬಂತು ಎನ್ನುವುದೇ ಸದ್ಯಕ್ಕೀಗ ಯಕ್ಷಪ್ರಶ್ನೆಯಾಗಿದೆ. 13 ಸೋಂಕಿತರ ಪೈಕಿ 10 ಮಂದಿಗೆ ಸೋಂಕಿನ ಮೂಲ ಯಾವುದು ಎನ್ನುವುದು ಪತ್ತೆಯಾಗಿಲ್ಲ.
19 ಕಾರ್ಮಿಕರ ಸ್ವಾಗತಕ್ಕೆ ಬಂದಿದ್ದು ಒಬ್ಬಿಬ್ಬರಲ್ಲ, 300 ಜನ..!
ಇದೀಗ ಆ 10 ಮಂದಿಯ ಟ್ರಾವೆಲ್ ಹಿಸ್ಟರಿಯನ್ನು ಬೆನ್ನತ್ತಿದ್ದಾರೆ ಆರೋಗ್ಯ ಅಧಿಕಾರಿಗಳು. ಹಾಸನದಲ್ಲೀಗ ಈ ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ 140ಕ್ಕೆ ಏರಿಕೆಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.