Asianet Suvarna News Asianet Suvarna News

ನೇತ್ರದಾನ ಪತ್ರಕ್ಕೆ ಸಹಿ, ವಿದ್ಯಾರ್ಥಿಗಳಿಗೆ ಪ್ರೇರಣೆ, ಸಮಾಜಕ್ಕೆ ಮಾದರಿಯಾದ ಶಿಕ್ಷಕರು!

ದಾನಗಳಲ್ಲಿ ಶ್ರೇಷ್ಠ ದಾನ ನೇತ್ರದಾನ ಎನ್ನುತ್ತಾರೆ. ಇತ್ತೀಚಿನ ದಿನದಲ್ಲಿ ವಿವಿಧ ಕಾರಣದಿಂದ ಅಂಧತ್ವ ಸಮಸ್ಯೆಗೊಳಗಾಗಿ ಜಗತ್ತನ್ನು ಕಾಣದೆ ಕತ್ತಲಿನಲ್ಲಿ ದಿನದೂಡುತ್ತಿರುವವರ ಸಂಖ್ಯೆ ಹೆಚ್ಚಿದೆ. ಅಂಥವರ ಬಾಳಿಗೆ ನೇತ್ರದಾನಿಗಳು ಬೆಳಕಾಗುತ್ತಿದ್ದಾರೆ. 

ಮಡಿಕೇರಿ (ಸೆ. 29): ದಾನಗಳಲ್ಲಿ ಶ್ರೇಷ್ಠ ದಾನ ನೇತ್ರದಾನ ಎನ್ನುತ್ತಾರೆ.  ಇತ್ತೀಚಿನ ದಿನದಲ್ಲಿ ವಿವಿಧ ಕಾರಣದಿಂದ ಅಂಧತ್ವ ಸಮಸ್ಯೆಗೊಳಗಾಗಿ ಜಗತ್ತನ್ನು ಕಾಣದೆ ಕತ್ತಲಿನಲ್ಲಿ ದಿನದೂಡುತ್ತಿರುವವರ ಸಂಖ್ಯೆ ಹೆಚ್ಚಿದೆ. ಅಂಥವರ ಬಾಳಿಗೆ ನೇತ್ರದಾನಿಗಳು ಬೆಳಕಾಗುತ್ತಿದ್ದಾರೆ. 

ಹೊಸ ರೂಪದಲ್ಲಿ ಕಣ್ಮನ ಸೆಳೆಯುತ್ತಿದೆ ರಾಜಾಸೀಟ್, ವ್ಯೂ ಪಾಯಿಂಟ್ ಅಂತೂ ಸೂಪರ್..!

ನಾವು ಕೂಡಾ ಅದೇ ರೀತಿ ಮಾಡಬೇಕು ಅಂತ ನಿರ್ಧರಿಸಿ, ಪೊನ್ನಂಪೇಟೆಯ ಸರ್ವದೈವತಾ ಸಂಸ್ಥೆಯ ಪ್ರಾಥಮಿಕ ಮುಖ್ಯಶಿಕ್ಷಕಿ ಶೀಲಾ ಬೋಪಣ್ಣ ನೀಡಿದ ಕರೆಗೆ 11 ಮಂದಿ ಸಹೊದ್ಯೋಗಿಗಳು ಬೆಂಬಲ ಸೂಚಿಸಿ ದಾನ ಪತ್ರಕ್ಕೆ ಸಹಿ ಹಾಕಿದ್ದಾರೆ. ಮನೆಯಪಂಡ ಶೀಲಾ ಬೋಪಣ್ಣ, ಶಿಕ್ಷಕರಾದ ಜಮ್ಮಡ ಲೀನಾ, ಕಾಕೇರ ಸ್ವಪ್ನಾ, ಕೆ.ಕೆ. ವಿದ್ಯಾ, ಬಿ.ಪಿ. ಶಿಲ್ಪಾ, ರಮ್ಯಾ ಬಿ. ಸಿ.ಎನ್. ಧರಣಿ, ಎಂ.ಎಚ್. ಮೋನಿಕಾ, ನಿಧಿ ಸೋಮಣ್ಣ, ಲೀನಾ ರಾಘವೇಂದ್ರ, ವಿ.ಎನ್. ಪ್ರಮೋದ್, ಆಶಿತಾ ನೇತ್ರದಾನಕ್ಕೆ ಮುಂದಾಗಿದ್ಧಾರೆ. ಶಿಕ್ಷಕರನ್ನು ಅನೇಕರು ಅನುಸರಿಸುತ್ತಾರೆ. ತಮ್ಮ ಈ ಕಾರ್ಯದಿಂದ ಜನ, ವಿದ್ಯಾರ್ಥಿಗಳು ಪ್ರೇರಣೆಗೊಳಗಾಗಿ ಇಂಥ ಕಾರ್ಯಕ್ಕೆ ಮುಂದಾದರೆ ಅದರಲ್ಲೂ ಸಾರ್ಥಕತೆ ಸಿಗುತ್ತೆ ಅನ್ನೋದು ಇವರ ಅಭಿಪ್ರಾಯ. 

Video Top Stories