Asianet Suvarna News Asianet Suvarna News

IPL 2020: ಸಂಭಾವನೆ ಕೋಟಿ-ಕೋಟಿ, ಕ್ರಿಕೆಟ್‌ನಲ್ಲಿ ಫುಲ್ ಫ್ಲಾಪ್ ಶೋ..!

ದುಬಾರಿ ಮೊತ್ತ ನೀಡಿ ಆಟಗಾರರನ್ನು ತಮ್ಮ ತೆಕ್ಕೆಗೆ ಸೆಳೆದುಕೊಂಡಿದ್ದ ಫ್ರಾಂಚೈಸಿಗಳು ಈಗ ಕೈ ಕೈ ಹಿಸುಕಿಕೊಳ್ಳಲಾರಂಭಿಸಿವೆ. ಇನ್ನು ಕೆಲವು ಫ್ರಾಂಚೈಸಿಗಳು ಇಂತಹ ದುಬಾರಿ ಆಟಗಾರರನ್ನು ಆಡುವ ಹನ್ನೊಂದರ ಬಳಗದಿಂದಲೇ ಕೈಬಿಟ್ಟಿವೆ.

ಬೆಂಗಳೂರು(ಅ.10): 13ನೇ ಸೀಸನ್ ಐಪಿಎಲ್ ಟೂರ್ನಿ ಆರಂಭವಾಗಿ 20 ದಿನಗಳು ಕಳೆದಿವೆ. ಆದರೆ ಟೂರ್ನಿ ಆರಂಭಕ್ಕೂ ಕೋಟಿ ಕೋಟಿ ಮೊತ್ತಕ್ಕೆ ಹರಾಜಾಗಿದ್ದ ಅಟಗಾರರು ಇದೀಗ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಒಂದೊಂದು ರನ್, ಒಂದು ವಿಕೆಟ್ ಪಡೆಯಲು ಪರದಾಡುತ್ತಿದ್ದಾರೆ.

ದುಬಾರಿ ಮೊತ್ತ ನೀಡಿ ಆಟಗಾರರನ್ನು ತಮ್ಮ ತೆಕ್ಕೆಗೆ ಸೆಳೆದುಕೊಂಡಿದ್ದ ಫ್ರಾಂಚೈಸಿಗಳು ಈಗ ಕೈ ಕೈ ಹಿಸುಕಿಕೊಳ್ಳಲಾರಂಭಿಸಿವೆ. ಇನ್ನು ಕೆಲವು ಫ್ರಾಂಚೈಸಿಗಳು ಇಂತಹ ದುಬಾರಿ ಆಟಗಾರರನ್ನು ಆಡುವ ಹನ್ನೊಂದರ ಬಳಗದಿಂದಲೇ ಕೈಬಿಟ್ಟಿವೆ.

ಮಿಡ್ ಸೀಸನ್ ಟ್ರಾನ್ಸ್‌ಫರ್‌ಗೆ ರೆಡಿಯಾದ ಈ 5 ಕ್ರಿಕೆಟಿಗರು..!

10 ಕೋಟಿ ರುಪಾಯಿ ಪಡೆದುಕೊಂಡಿರುವ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಆಲ್ರೌಂಡರ್ ಗ್ಲೆನ್‌ ಮ್ಯಾಕ್ಸ್ ಕಳೆದ 6 ಪಂದ್ಯಗಳಲ್ಲಿ ಸಂಪೂರ್ಣ ಫ್ಲಾಫ್ ಅಗಿದ್ದಾರೆ. ಇನ್ನು ಕೇದಾರ್ ಜಾಧವ್ ಬಗ್ಗೆ ಪ್ರತ್ಯೇಕವಾಗಿ ಹೇಳೋದೇ ಬೇಡ ಎನಿಸುತ್ತೆ. ಇಲ್ಲಿಯವರೆಗೂ ಐಪಿಎಲ್‌ನಲ್ಲಿ ಫೇಲ್ ಆದ ಆಟಗಾರರ ವಿವರ ಇಲ್ಲಿದೆ ನೋಡಿ.
 

Video Top Stories