Asianet Suvarna News Asianet Suvarna News

IPL 2020: ಧೋನಿ ಪಡೆ ಮೇಲೆ ಮತ್ತೆ ಸವಾರಿ ಮಾಡುತ್ತಾ ಹೈದರಾಬಾದ್..?

ಈಗಾಗಲೇ ಎರಡೂ ತಂಡಗಳು ತಲಾ 7 ಪಂದ್ಯಗಳನ್ನಾಡಿದ್ದು, ಈ ಪೈಕಿ ಡೇವಿಡ್ ವಾರ್ನರ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ 5ನೇ ಸ್ಥಾನದಲ್ಲಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡ 7ನೇ ಸ್ಥಾನದಲ್ಲಿದೆ.
 

ದುಬೈ(ಅ.13): 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 29ನೇ ಪಂದ್ಯದಲ್ಲಿಂದು ದಕ್ಷಿಣ ಭಾರತದ ಎರಡು ಪ್ರಬಲ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಹೈವೋಲ್ಟೇಜ್ ಪಂದ್ಯದಕ್ಕೆ ದುಬೈನ ಅಂತಾರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಲಿದೆ.

ಈಗಾಗಲೇ ಎರಡೂ ತಂಡಗಳು ತಲಾ 7 ಪಂದ್ಯಗಳನ್ನಾಡಿದ್ದು, ಈ ಪೈಕಿ ಡೇವಿಡ್ ವಾರ್ನರ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ 5ನೇ ಸ್ಥಾನದಲ್ಲಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡ 7ನೇ ಸ್ಥಾನದಲ್ಲಿದೆ.

ಮಿಡ್ ಸೀಸನ್ ಟ್ರಾನ್ಸ್‌ಫರ್‌: ಮತ್ತೆ ಆರ್‌ಸಿಬಿಗೆ ಬರ್ತಾರಾ ಗೇಲ್..?

ಚೆನ್ನೈ ಹಾಗೂ ಹೈದರಾಬಾದ್ 2 ತಂಡಗಳಲ್ಲೂ ಬಲಿಷ್ಠ ಆರಂಭಿಕರಿದ್ದರೂ, ಮಧ್ಯಮ ಕ್ರಮಾಂಕ ಉಭಯ ತಂಡಗಳಿಗೂ ಕೈಕೊಡುತ್ತಿದೆ. ದುಬೈನಲ್ಲಿ ನಡೆಯಲಿರುವ ಪಂದ್ಯದ ಇಂಟ್ರೆಸ್ಟಿಂಗ್ ವಿಶ್ಲೇಷಣೆ ಇಲ್ಲಿದೆ ನೋಡಿ

Video Top Stories