Asianet Suvarna News Asianet Suvarna News

IPL 2020: RCB ಅಭಿಮಾನಿಗಳಿಗೆ ಭರ್ಜರಿ ಆಫರ್..!

ಆರ್‌ಸಿಬಿ ಮ್ಯಾಚ್ ನೋಡಿ, ಹೊಟ್ಟೆತುಂಬ ಊಟ ಮಾಡಿ ಎನ್ನುವ ಸ್ಲೋಗನ್ ಇಟ್ಟುಕೊಂಡು ಹೋಟೆಲ್ ಮಾಲೀಕರೊಬ್ಬರು ಆರ್‌ಸಿಬಿ ಅಭಿಮಾನಿಗಳಿಗೆ ಭರ್ಜರಿ ಆಫರ್ ನೀಡಿದ್ದಾರೆ. ಅರಮನೆ ನಗರಿ ಮೈಸೂರಿನಲ್ಲಿ ಐಪಿಎಲ್ ಕಿಕ್ ಜೋರಾಗಿದೆ.
 

ಮೈಸೂರು(ಅ.16): ಕಳೆದ 12 ಆವೃತ್ತಿಗಳಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲಲೂ ಸಾಧ್ಯವಾಗದಿದ್ದರೂ, ತಂಡ ಮೇಲಿನ ಅಭಿಮಾನ ಮಾತ್ರ ಅಭಿಮಾನಿಗಳಲ್ಲಿ ಕಮ್ಮಿಯಾಗಿಲ್ಲ. ಮೈಸೂರಿನ ಅಭಿಮಾನಿಯೊಬ್ಬ ಆರ್‌ಸಿಬಿ ಅಭಿಮಾನಿಗಳಿಗೆ ಭರ್ಜರಿ ಆಫರ್ ನೀಡಿದ್ದಾರೆ.

ಆರ್‌ಸಿಬಿ ಮ್ಯಾಚ್ ನೋಡಿ, ಹೊಟ್ಟೆತುಂಬ ಊಟ ಮಾಡಿ ಎನ್ನುವ ಸ್ಲೋಗನ್ ಇಟ್ಟುಕೊಂಡು ಹೋಟೆಲ್ ಮಾಲೀಕರೊಬ್ಬರು ಆರ್‌ಸಿಬಿ ಅಭಿಮಾನಿಗಳಿಗೆ ಭರ್ಜರಿ ಆಫರ್ ನೀಡಿದ್ದಾರೆ. ಅರಮನೆ ನಗರಿ ಮೈಸೂರಿನಲ್ಲಿ ಐಪಿಎಲ್ ಕಿಕ್ ಜೋರಾಗಿದೆ.

ಐಪಿಎಲ್‌ನಲ್ಲಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಸಿಎಸ್‌ಕೆ.!

ಆರ್‌ಸಿಬಿ ಮ್ಯಾಚ್ ನೋಡುತ್ತಾ ಬಿಸಿಬಿಸಿ ಬಿರ್ಯಾನಿ ಹಾಗೂ ಚಿಕನ್ ಚಾಪ್ಸ್ ಕೇವಲ 99 ರುಪಾಯಿಗೆ ಸಿಕ್ಕರೆ ಹೇಗಿರಬಹುದು. ನೆನಸಿಕೊಂಡರೇ ಬಾಯಲ್ಲಿ ನೀರೂರತ್ತೆ. ಇಂತಹದ್ದೊಂದು ಆಫರ್ ಅನ್ನು ಮೈಸೂರಿನ ಆರ್‌ಸಿಬಿ ಅಭಿಮಾನಿ ಕಮ್ ಮಾಲೀಕ ನೀಡಿದ್ದಾರೆ. ಈ ಕುರಿತಾದ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.
 

Video Top Stories