ಕೇದಾರನಾಥ ಮಂದಿರ 'ಸುವರ್ಣಮಯ': ಮರುಕಳಿಸಿದ ಗತವೈಭವ
ವಿಶ್ವವಿಖ್ಯಾತ ಕೇದಾರನಾಥ ಮಂದಿರ ಪ್ರವಾಹದ ಬಳಿಕ ಬದಲಾಗಿದ್ದು, ಬೋಲೇನಾಥನ ಗರ್ಭಗುಡಿ ಸುವರ್ಣಮಯವಾಗುತ್ತಿದೆ.
ಕೇದಾರನಾಥ ಮಂದಿರ ಇದೀಗ ಸ್ವರ್ಣ ವರ್ಣದಿಂದ ಕಂಗೊಳಿಸುವುದ್ದಕ್ಕೆ ತಯಾರಾಗಿದೆ. ಇನ್ನು ಆರು ತಿಂಗಳಲ್ಲಿ ಬಂಗಾರದ ಪ್ರಭೆಯೇ ದೇಗುಲದಲ್ಲಿ ಭಕ್ತರನ್ನು ಸ್ವಾಗತಿಸುತ್ತದೆ. ಬೋಲೇನಾಥನ ಗರ್ಭಗುಡಿಗೆ ಬೆಳ್ಳಿಯ ಬದಲು ಬಂಗಾರ ಬಂದಿದ್ದು, 250 ಕೆ.ಜಿ ಬಂಗಾರ, 550 ಪದರದಿಂದ ಕಂಗೊಳಿಸಲಿದೆ. ಸೋಮನಾಥ ಮಂದಿರ ಹಾದಿಯಲ್ಲಿ ಕೇದಾರನಾಥ ಬದಲಾಗುತ್ತಿದೆ. ಹಿಂದೆಂದೂ ನಾವ್ಯಾರೂ ನೋಡದಷ್ಟು ಅದ್ಭುತವಾಗಿ ಬದಲಾಗುತ್ತಿದೆ.