ತನ್ನ ದೇಶ 'ಕೈಲಾಸ'ಕ್ಕೆ ಬರಲು, ವಿಮಾನ, ವೀಸಾ ಆಫರ್ ನೀಡಿದ ನಿತ್ಯಾನಂದ!

ವಿವಾದಿತ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ತನ್ನ ದೇಶಕ್ಕೆ ಬರುವಂತೆ ಭಕ್ತಾದಿಗಳಿಗೆ ಕರೆ ನೀಡಿದ್ದಾನೆ. 

First Published Dec 20, 2020, 7:07 PM IST | Last Updated Dec 20, 2020, 7:07 PM IST

ಬೆಂಗಳೂರು, (ಡಿ.20): ವಿವಾದಿತ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ತನ್ನ ದೇಶಕ್ಕೆ ಬರುವಂತೆ ಭಕ್ತಾದಿಗಳಿಗೆ ಕರೆ ನೀಡಿದ್ದಾನೆ. ಭಾರತದಿಂದ ತಲೆಮರೆಸಿಕೊಂಡು ಈಕ್ವೆಡಾರ್‌ನಲ್ಲಿ ಆಶ್ರಯ ಪಡೆದಿರುವ  ನಿತ್ಯಾನಂದ, ಇದೀಗ ತನ್ನ ದೇಶ ಕೈಲಾಸಕ್ಕೆ ಬರಲು ವೀಸಾ ಅರ್ಜಿ ಸಲ್ಲಿಸುವಂತೆ ತನ್ನ ಭಕ್ತರಲ್ಲಿ ಮನವಿ ಮಾಡಿದ್ದಾನೆ.

ಕೈಲಾಸ ದೇಶದಲ್ಲಿ 1 ಲಕ್ಷ ಜನರಿಗೆ ವಾಸಕ್ಕೆ ಅವಕಾಶ! 

ಕೈಲಾಸಕ್ಕೆ ಬರಲು ಇಚ್ಛಿಸುವ ಭಕ್ತರು ವೀಸಾ ಅರ್ಜಿಗಳನ್ನು ಸಲ್ಲಿಸುವಂತೆ ಮನವಿ ಮಾಡಿರುವ ನಿತ್ಯಾನಂದ ಈ ಪ್ರಕ್ರಿಯೆಯ ಹಂತಗಳನ್ನೂ ವಿವರಿಸಿದ್ದಾನೆ. ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ನಿತ್ಯಾನಂದ, ಕೈಲಾಸಕ್ಕೆ ಬಂದು ತಲುಪುವ ಬಗೆಯನ್ನೂ ಕೂಡ ವಿವರಿಸಿದ್ದಾನೆ.