ಹೇಗಿದೆ ದೇಶಿಯ ಯುದ್ಧವಿಮಾನ ನೌಕೆ 'ವಿಕ್ರಾಂತ್'? ಕೊಚ್ಚಿನ್ ಶಿಪ್‌ಯಾರ್ಡ್‌ನ CMD ಜತೆ ಎಕ್ಸ್‌ಕ್ಲ್ಯೂಸಿವ್ ಸಂವಾದ
Asianet News Samvad: ಏಷ್ಯಾನೆಟ್‌ನ ಅಭಿಲಾಷ್ ಜಿ ನಾಯರ್ ಅವರು ಕೊಚ್ಚಿನ್ ಶಿಪ್‌ಯಾರ್ಡ್‌ನ ಸಿಎಂಡಿ ಡಾ ಮಧು ಎಸ್ ನಾಯರ್ ಅವರೊಂದಿಗೆ ವಿಶೇಷ ಸಂವಾದ ನಡೆಸಿದರು. ಸೆಪ್ಟೆಂಬರ್ 2 ರಂದು ಪ್ರಧಾನಿ ನರೇಂದ್ರ ಮೋದಿ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ದೇಶದ ಪ್ರಥಮ ಸ್ವದೇಶಿ ನಿರ್ಮಿತ ವಿಕ್ರಾಂತ್ ಯುದ್ಧವಾಹಕ ನೌಕೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಕೇರಳ (ಆ. 28): ಕೇರಳದ ಕೊಚ್ಚಿನ್ ಶಿಪ್‌ಯಾರ್ಡ್ ಭಾರತೀಯ ನೌಕಾಪಡೆಗಾಗಿ ಭಾರತದ ಮೊದಲ ಸ್ವದೇಶಿ ಮೊದಲ ಯುದ್ಧವಿಮಾನ ನೌಕೆಯನ್ನು ನಿರ್ಮಿಸಿದೆ. ಈ ನೌಕೆಯನ್ನು ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 2ರಂದು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ದೇಶಿಯವಾಗಿ ನಿರ್ಮಿತ ಮೊದಲ ಯುದ್ಧವಿಮಾನ ನೌಕೆ ‘ವಿಕ್ರಾಂತ್’ ಅನ್ನು ಉತ್ಪಾದನಾ ಕಂಪನಿ ಕೊಚ್ಚಿನ್ ಶಿಪ್‌ಯಾರ್ಡ್ ಭಾರತೀಯ ನೌಕಾಪಡೆಗೆ ಹಸ್ತಾಂತರಿಸಿದೆ.
ಈ ನೌಕೆ ನಿರ್ಮಾಣದ ಮೂಲಕ ಭಾರತವು ಕ್ಲಿಷ್ಟಕರ ಯುದ್ಧವಿಮಾನ ನೌಕೆಯನ್ನು ದೇಶೀಯವಾಗಿ ವಿನ್ಯಾಸಗೊಳಿಸುವ ಸಾಮರ್ಥ್ಯವುಳ್ಳ ಕೆಲವೇ ದೇಶಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. 75ನೇ ಸ್ವಾತಂತ್ರ್ಯ ದಿನ ಆಚರಣೆಯ ಹಿನ್ನೆಲೆಯಲ್ಲಿ ವಿಕ್ರಾಂತ್ ಹಸ್ತಾಂತರವನ್ನು ಭಾರತೀಯ ನೌಕಾಪಡೆ ‘ಐತಿಹಾಸಿಕ’ ಎಂದು ಕರೆದಿದೆ.
ಮೇಡ್ ಇನ್ ಇಂಡಿಯಾ ವಿಮಾನವಾಹಕ ಯುದ್ಧನೌಕೆ ವಿಕ್ರಾಂತ್ ಸೆ.2ಕ್ಕೆ ಸೇನೆಗೆ ಸೇರ್ಪಡೆ!
ಏಷ್ಯಾನೆಟ್ ನ್ಯೂಸನ್ ಸಂವಾದದಲ್ಲಿ ಮಾತನಾಡಿರುವ ಕೊಚ್ಚಿನ್ ಶಿಪ್‌ಯಾರ್ಡ್‌ನ ಸಿಎಂಡಿ ಡಾ ಮಧು ಎಸ್ ನಾಯರ್ ಮೊದಲ ಸ್ವದೇಶಿ ಯುದ್ಧವಿಮಾನ ನೌಕೆ ಹೇಗಿದೆ ಮತ್ತು ಅದನ್ನು ಹೇಗೆ ಸಿದ್ಧಪಡಿಸಲಾಗಿದೆ? ಹಾಗೆಯೇ ಭವಿಷ್ಯದ ಸಾಧ್ಯತೆಗಳೇನು ಸೇರಿದಂತೆ ಇತರ ಮಾಹಿತಿಯನ್ನು ನೀಡಿದ್ದಾರೆ. ಏಷ್ಯಾನೆಟ್‌ನ ಅಭಿಲಾಷ್ ಜಿ ನಾಯರ್ ಕೊಚ್ಚಿನ್ ಶಿಪ್‌ಯಾರ್ಡ್‌ನ ಸಿಎಂಡಿ ಡಾ ಮಧು ಎಸ್ ನಾಯರ್ ಅವರೊಂದಿಗೆ ವಿಶೇಷ ಸಂವಾದ ಇಲ್ಲಿದೆ