Turning Point: ಬಾಬ್ರಿ ಮಸೀದಿ ಗುಂಬಾಜ್‌ ಒಡೆದಾಗ ಮೌನವಾಗಿದ್ದೇಕೆ ನರಸಿಂಹ ರಾವ್‌ ? ಆ ನಿರ್ಣಯ ದೇಶದ ದಿಕ್ಕು ಬದಲಿಸಿತ್ತಾ ?

ಡಿಸೆಂಬರ್‌ 6, 1992 ರಂದು ಕರಸೇವೆಗೆ ಬರುವಂತೆ ವಿಶ್ವ ಹಿಂದೂ ಪರಿಷತ್ ಕರೆ ನೀಡುತ್ತದೆ. ಆಗ ಕಾಂಗ್ರೆಸ್‌ ನಾಯಕರು ಯುಪಿ ರಾಜ್ಯ ಸರ್ಕಾರವನ್ನು ತೆಗೆದುಹಾಕುವಂತೆ ಸಲಹೆ ನೀಡುತ್ತಾರೆ.

First Published Apr 3, 2024, 3:07 PM IST | Last Updated Apr 3, 2024, 3:07 PM IST

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿನ(Ayodhya) ಬಾಬ್ರಿ ಮಸೀದಿಯನ್ನು(Babri Masjid) 1990, ಅಕ್ಟೋಬರ್‌ 30 ರಂದು ಕೆಡವಲಾಯಿತು. ಅಲ್ಲದೇ ಅಲ್ಲೇ ಒಂದು ಚಿಕ್ಕ ದೇವಸ್ಥಾನ ಸಹ ಹುಟ್ಟಿಕೊಳ್ತು. ದೇಶದ ಮೂಲೆ ಮೂಲೆಯಿಂದ ಕರಸೇವಕರು ಮಂದಿರವನ್ನು ಅಲ್ಲೇ ಕಟ್ಟುತ್ತೇವೆ ಎಂದು ಬಂದಿದ್ದರು. ಮುಲಾಯಂ ಸಿಂಗ್‌ ಯಾದವ್‌ ಸರ್ಕಾರ ಈ ವೇಳೆ ಸತತ ಎರಡು ದಿನ ಕರಸೇವಕರ ಮೇಲೆ ಗುಂಡಿನ ದಾಳಿಯನ್ನು ನಡೆಸುತ್ತದೆ. ಈ ವೇಳೆ ಯುಪಿ ಎಲೆಕ್ಷನ್‌ ಬಂದಿದ್ದು, ಬಿಜೆಪಿ(BJP) ಬಹುಮತ ಪಡೆಯಿತು. ಕಲ್ಯಾಣ್‌ ಸಿಂಗ್‌ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಈ ವೇಳೆ ಪಿವಿ ನರಸಿಂಹ ರಾವ್‌(PV Narasimha Rao)ಪ್ರಧಾನಿಯಾಗಿರುತ್ತಾರೆ.ಅವರಿಗೆ ರಾಮ ಮಂದಿರ ದೊಡ್ಡ ಸವಾಲಾಗಿತ್ತು. 

ಇದನ್ನೂ ವೀಕ್ಷಿಸಿ:  Sumalatha: ನಾನು ಬಿಜೆಪಿಗೆ ಬೆಂಬಲ ನೀಡುತ್ತಿದ್ದೇನೆ, ಸೇರ್ಪಡೆ ಬಳಿಕ ಮೈತ್ರಿ ಅಭ್ಯರ್ಥಿಗೆ ಬೆಂಬಲ: ಸುಮಲತಾ