ಕೇದಾರನಾಥನಿಗೆ ರೋಪ್‌ವೇ, ಮಹಾಶಿವನಿಗೆ ಮೋದಿ ಭಕ್ತಿ!

ಹಿಂದೂ ಹಾಗೂ ಸಿಖ್ಖರ ಪವಿತ್ರ ತೀರ್ಥಕ್ಷೇತ್ರಗಳಾಗಿರುವ ಉತ್ತರಾಖಂಡದ ಕೇದಾರನಾಥ ಹಾಗೂ ಹೇಮಕುಂಡ ಸಾಹಿಬ್‌ಗೆ ದೇಶದ ಎರಡು ಅತಿ ಉದ್ದದ ರೋಪ್‌ವೇ ಯೋಜನೆಗೆ  ಕೇದಾರನಾಥದಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
 

First Published Oct 21, 2022, 10:32 AM IST | Last Updated Oct 21, 2022, 10:32 AM IST

ಕೇದಾರನಾಥ (ಅ.21): ಎರಡು ದಿನಗಳ ಉತ್ತರಾಖಂಡ ಭೇಟಿ ಆರಂಭ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಕೇದಾರನಾಥದಲ್ಲಿ ದೇಶದ ಅತಿಉದ್ಧದ ರೋಪ್‌ವೇ ಪ್ರಾಜೆಕ್ಟ್‌ಗೆ ಚಾಲನೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನಲೆಯಲ್ಲಿ ಕೇದಾರನಾಥ ಹಾಗೂ ಬದ್ರಿನಾಥ ಕ್ಷೇತ್ರಗಳಲ್ಲಿ ಹೂವಿನ ಅಲಂಕಾರ ಮಾಡಲಾಗಿದ್ದು, ಭದ್ರತೆಯನ್ನು ಬಿಗಿ ಮಾಡಲಾಗಿದೆ.

ಅವರು ಕೇದಾರನಾಥ ಮತ್ತು ಬದ್ರಿನಾಥ್‌ ಧಾಮಗಳಲ್ಲಿ 9.7-ಕಿಮೀ ಗೌರಿಕುಂಡ್-ಕೇದಾರನಾಥ ರೋಪ್‌ವೇ ಮತ್ತು ರಾಷ್ಟ್ರೀಯ ಹೆದ್ದಾರಿ 7 ರ ರಸ್ತೆ-ವಿಸ್ತರಣೆ ಸೇರಿದಂತೆ ಹಿಂದೂ ಯಾತ್ರಾ ಕೇಂದ್ರಗಳಾದ ರಿಷಿಕೇಶ್, ಜೋಶಿಮಠ ಮತ್ತು ಬದ್ರಿನಾಥ್‌ ಅನ್ನು ಡೆಹ್ರಾಡೂನ್‌ನೊಂದಿಗೆ ಸಂಪರ್ಕಿಸುವ ಹಲವಾರು ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು. 

ಇಂದು ಕೇದಾರನಾಥಕ್ಕೆ ಮೋದಿ ಭೇಟಿ: ಭಾರತದ ಅತಿ ಉದ್ದ ರೋಪ್‌ವೇಗೆ ಇಂದು ಶಂಕುಸ್ಥಾಪನೆ

ಕೇದಾರನಾಥ ರೋಪ್ ವೇ ಸುಮಾರು 9.7 ಕಿ.ಮೀ ಉದ್ಧವಿರಲಿದೆ. ಇದು ಗೌರಿಕುಂಡ್ ಅನ್ನು ಕೇದಾರನಾಥದೊಂದಿಗೆ ಸಂಪರ್ಕಿಸುತ್ತದೆ, ಎರಡು ಸ್ಥಳಗಳ ನಡುವಿನ ಪ್ರಯಾಣದ ಸಮಯವನ್ನು 6 ರಿಂದ 7 ಗಂಟೆಗಳಿಂದ ಸುಮಾರು 30 ನಿಮಿಷಗಳವರೆಗೆ ಕಡಿಮೆ ಮಾಡುತ್ತದೆ. ಹೇಮಕುಂಡ್ ರೋಪ್‌ವೇ ಗೋವಿಂದ್ ಘಾಟ್ ಅನ್ನು ಗುರುದ್ವಾರ ಶ್ರೀ ಹೇಮಕುಂಡ್ ಸಾಹಿಬ್‌ಗೆ ಸಂಪರ್ಕಿಸುತ್ತದೆ. ಇದು ಸುಮಾರು 12.4-ಕಿಮೀ ಉದ್ದವಿರುತ್ತದೆ ಮತ್ತು ಪ್ರಯಾಣದ ಸಮಯವನ್ನು ಒಂದು ದಿನದಿಂದ ಕೇವಲ 45 ನಿಮಿಷಗಳಿಗೆ ಕಡಿಮೆ ಮಾಡುತ್ತದೆ.