7 ವರ್ಷಗಳ ಬಳಿಕ ನಿರ್ಭಯಾಗೆ ನ್ಯಾಯ; ಅತ್ಯಾಚಾರಿಗಳು ನೇಣಿಗೆ
ಏಳು ವರ್ಷಗಳ ಹಿಂದೆ ರಾಜಧಾನಿ ದೆಹಲಿಯಲ್ಲಿ ನಡೆದಿದ್ದ ‘ನಿರ್ಭಯಾ’ ಅತ್ಯಾಚಾರ ಹಾಗೂ ಅಮಾನುಷ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ನೇಣುಗಂಬಕ್ಕೆ ಏರಿಸಲು ಇದ್ದ ಎಲ್ಲ ಅಡೆ-ತಡೆಗಳು ನಿವಾರಣೆಯಾಗಿವೆ. ಇಂದು ನಸುಕಿನ ಜಾವ 5.30ಕ್ಕೆ ಸರಿಯಾಗಿ ಅತ್ಯಾಚಾರಿಗಳಾದ ಮುಕೇಶ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಶರ್ಮಾ (26) ಹಾಗೂ ಅಕ್ಷಯ್ ಠಾಕೂರ್ (31) ಗಲ್ಲುಗಂಬವನ್ನೇರಿದ್ದಾರೆ.
ನವದೆಹಲಿ (ಮಾ. 20): ಏಳು ವರ್ಷಗಳ ಹಿಂದೆ ರಾಜಧಾನಿ ದೆಹಲಿಯಲ್ಲಿ ನಡೆದಿದ್ದ ‘ನಿರ್ಭಯಾ’ ಅತ್ಯಾಚಾರ ಹಾಗೂ ಅಮಾನುಷ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ನೇಣುಗಂಬಕ್ಕೆ ಏರಿಸಲು ಇದ್ದ ಎಲ್ಲ ಅಡೆ-ತಡೆಗಳು ನಿವಾರಣೆಯಾಗಿವೆ. ಇಂದು ನಸುಕಿನ ಜಾವ 5.30ಕ್ಕೆ ಸರಿಯಾಗಿ ಅತ್ಯಾಚಾರಿಗಳಾದ ಮುಕೇಶ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಶರ್ಮಾ (26) ಹಾಗೂ ಅಕ್ಷಯ್ ಠಾಕೂರ್ (31) ಗಲ್ಲುಗಂಬವನ್ನೇರಿದ್ದಾರೆ.
ಕೊನೆಯೂ ನಿರ್ಭಯಾಗೆ ಸಿಕ್ತು ನ್ಯಾಯ: ಕಾಮುಕರಿಗೆ ಗಲ್ಲು
ನಿಗದಿಯಾಗಿದ್ದ ಗಲ್ಲು ಶಿಕ್ಷೆಯನ್ನೇ ಎರಡು ಬಾರಿ ಮುಂದೂಡುವ ರೀತಿ ಮಾಡಿದ್ದ ನಿರ್ಭಯಾ ಹಂತಕರು ಗುರುವಾರ ಕೂಡ ಹಲವು ದಾಳಗಳನ್ನು ಉರುಳಿಸಿದರು. ಅಪ್ರಾಪ್ತ ಎಂಬ ವಾದ ತಿರಸ್ಕರಿಸಿದ್ದರ ವಿರುದ್ಧ ಕ್ಯುರೇಟಿವ್ ಅರ್ಜಿ, ಘಟನೆ ನಡೆದಾಗ ದೆಹಲಿಯಲ್ಲೇ ಇರಲಿಲ್ಲ ಎಂಬ ವಾದ, ಕ್ಷಮಾದಾನ ಅರ್ಜಿ ತಿರಸ್ಕಾರ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಅವಕಾಶಗಳನ್ನು ಬಳಸಿಕೊಂಡರು. ಆದರೆ ಈ ಎಲ್ಲ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತು.