ಸದೃಢ ಭಾರತ, ಆತ್ಮ ನಿರ್ಭರ ಭಾರತದ ಪ್ರತೀಕ ನೂತನ ಸಂಸತ್ ಭವನ: ಮೋದಿ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನೂತನ ಸಂಸತ್ ಭವನ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, ನೂತನ ಕಟ್ಟಡ ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಸಾಕ್ಷಿಯಾಗಲಿದೆ ಎಂದು ಹೇಳಿದರು.

 

First Published Dec 10, 2020, 4:06 PM IST | Last Updated Dec 10, 2020, 4:12 PM IST

ನವದೆಹಲಿ(ಡಿ.10): ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನೂತನ ಸಂಸತ್ ಭವನ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, ನೂತನ ಕಟ್ಟಡ ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಸಾಕ್ಷಿಯಾಗಲಿದೆ ಎಂದು ಹೇಳಿದರು.

ತ್ರಿಭುಜಾಕೃತಿಯಲ್ಲಿ ಹೊಸ ಶಕ್ತಿಸೌಧ: ಹೀಗಿರಲಿದೆ ನೂತನ ಸಂಸತ್ ಭವನ!

ಪ್ರಸ್ತುತ ಸಂಸತ್ ಭವನ ಕಟ್ಟಡ ಸ್ವಾತಂತ್ರ್ಯದ ನಂತರದ ದೇಶದ ದಿಕ್ಕನ್ನು ನಿರ್ಧರಿಸಿದೆ. ಈ ಕಟ್ಟಡ ಹಲವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ನಾನು 2014ರಲ್ಲಿ ಮೊದಲ ಬಾರಿಗೆ ಸಂಸತ್ ಸದಸ್ಯನಾಗಿ ಈ ಕಟ್ಟಡಕ್ಕೆ ಆಗಮಿಸಿದಾಗ ಈ ಭವ್ಯ ಕಟ್ಟಡಕ್ಕೆ ನಮನ ಸಲ್ಲಿಸಿದ್ದೆ ಎಂದು ಪ್ರಧಾನಿ ಮೋದಿ ನೆನಪಿಸಿದರು.

ನೂತನ ಸಂಸತ್ ಭವನಕ್ಕೆ ಶೃಂಗೇರಿ ಮಠದ ಪುರೋಹಿತರಿಂದ ಭೂಮಿ ಪೂಜೆ

ಆದರೆ ಸ್ವಾತಂತ್ರ್ಯದ ನಂತರ 75 ವರ್ಷಗಳಲ್ಲಿ ದೇಶ ಸೇವೆ ಮಾಡಿರುವ ಪ್ರಸ್ತುತ ಕಟ್ಟಡಕ್ಕೆ ವಿಶ್ರಾಂತಿ ನೀಡುವ ಸಮಯ ಬಂದಿದ್ದು, ಹೊಸ ಸಂಸತ್ ಭವನ ಆಧುನಿಕ ಭಾರತದ ದಿಕ್ಕನ್ನು ನಿರ್ಧರಿಸಲಿ ಎಂದು ಪ್ರಧಾನಿ ಮೋದಿ ಹಾರೈಸಿದರು.