Asianet Suvarna News Asianet Suvarna News

ವ್ಯೂಹ ರಚನೆಗೂ ಮುನ್ನವೇ, ರಣಕಲಿಗಳ ಅಂತಃಕಲಹ: ಮಹಾಘಟಬಂಧನ್ ಪಟಾಕಿ ಸಿಡಿಯುತ್ತೋ? ಠುಸ್ ಆಗುತ್ತೋ ?

ಏನು ಗೊತ್ತಾ.. ಮಹಾಮೈತ್ರಿ ಪಟಾಕಿ ಸೀಕ್ರೆಟ್..?
ಅಂದು ಕರ್ನಾಟಕದಲ್ಲಿ ನಡೆದಿತ್ತು  ಮೈತ್ರಿ ಮ್ಯಾಜಿಕ್..
ಈಗ ಮ್ಯಾಜಿಕ್ ಮಾಡಲು ರೆಡಿಯಾಗಿದೆ ಮಹಾಮೈತ್ರಿ!

ದೇಶದಲ್ಲಿ ಸದ್ಯಕ್ಕೀಗ ನಂಬರ್ 1 ಪೊಲಿಟಿಕಲ್ ಮಾಸ್ ಲೀಡರ್ ಅಂತ ಯಾರಾದ್ರೂ ಇದ್ರೆ, ಅದು ಪ್ರಧಾನಿ ನರೇಂದ್ರ ಮೋದಿ ಮಾತ್ರ. ಈ ಮಾತನ್ನ ಮೋದಿ ಅವರ ಬದ್ಧ ಶತ್ರುಗಳೇ ಇದ್ರೂ ತಳ್ಳಿ ಹಾಕೋಕೆ ಸಾಧ್ಯವಿಲ್ಲ. ಅಷ್ಟೇ ಅಲ್ಲ, ಎಷ್ಟೋ ರಾಜ್ಯಗಳಲ್ಲಿ ಕಾಂಗ್ರೆಸ್ ಗೆದ್ದರೂ, ಬಿಜೆಪಿ ಸೋತರೂ, ಅದನ್ನ ಎದುರಾಳಿಗಳು ಹೇಗೆ ಪ್ರೊಜೆಕ್ಟ್ ಮಾಡಿದ್ರೂ, ಲೋಕಸಭಾ ಚುನಾವಣೆ ಅಂತ ಬಂದಾಗ, ಜನರ ಒಲವು ತಾನೇ ತಾನಾಗಿ ಮೋದಿ ಅವರ ಕಡೆ ವಾಲುತ್ತೆ ಅನ್ನೋದೊಂದು ವಾದ ಇದೆ. 2014ರಲ್ಲಿ ಉದ್ಭವಿಸಿದ, ಮೋದಿ ಅನ್ನೋ ಮಹಾಸುನಾಮಿಗೆ ಈ ತನಕ ತಡೆಯೊಡ್ಡಬಲ್ಲ ಅಣೆಕಟ್ಟು ನಿರ್ಮಿಸೋಕೆ, ಎದುರಾಳಿ ಪಡೆಗಳಿಗೆ ಸಾಧ್ಯವಾಗಿಲ್ಲ. ಆದ್ರೆ, ಮೋದಿ ಅವರ ಈ ಅಶ್ವಮೇಧದ ಕುದುರೆನಾ, 2024ರಲ್ಲಾರೂ ಕಟ್ಟಿ ಹಾಕ್ಬೇಕು ಅನ್ನೋ ನಿರ್ಣಯಕ್ಕೆ, ವಿಪಕ್ಷಗಳು ಬಂದಿದ್ದಾವೆ. ಅದಾಗಲೇ ತಾವು ಸಿದ್ಧ ಪಡಿಸಿಕೊಂಡಿದ್ದ ಹಳೆ ವ್ಯೂಹವೊಂದಕ್ಕೆ, ಹೊಸ ಚೈತನ್ಯ ತುಂಬೋಕೆ ನೋಡ್ತಿದ್ದಾವೆ. ಆ ವ್ಯೂಹದ ಹೆಸರೇ, ಮಹಾಘಟಬಂಧನ.

ಇದನ್ನೂ ವೀಕ್ಷಿಸಿ: ಭತ್ತದ ಕಣಜದಿಂದಲೇ ರಾಜ್ಯಕ್ಕೆ ಬರಲಿದ್ಯಾ ಟನ್‌ಗಟ್ಟಲೆ ಅಕ್ಕಿ?: "ಭಗವಂತ"ನ ಅಭಯ, ಈ ಕಾಳಗದಲ್ಲಿ ಗೆದ್ದರಾ ಸಿದ್ದು?

Video Top Stories