LK Advani: ಕರಾಚಿ ಜನ್ಮಭೂಮಿ.. ಭಾರತ ಕರ್ಮಭೂಮಿ.. ಕೇಸರಿ ಲೋಹಪುರುಷ..!
ಆರೆಸ್ಸೆಸ್ ಪ್ರಚಾರಕ.. ಜನಸಂಘದ ನಾಯಕ.. ಬಿಜೆಪಿ ರಾಷ್ಟ್ರಾಧ್ಯಕ್ಷ..!
ರಾಮಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಿತ್ತು ರಾಮ ರಥಯಾತ್ರೆ..!
"ಮಂದಿರ್ ವಹೀ ಬನಾಯೇಂಗೇ.." ಎಂದು ಘರ್ಜಿಸಿದ್ದರು ಅಡ್ವಾಣಿ..!
ಭಾರತದ ಉಕ್ಕಿನ ಮನುಷ್ಯನಿಗೆ, ಬಿಜೆಪಿಯ(BJP) ಲೋಹಪುರುಷವಿಗೆ, ಬಿಜೆಪಿ ಭೀಷ್ಮಾಚಾರ್ಯನಿಗೆ ಭಾರತ ರತ್ನ(Bharat Ratna). ಕರಾಚಿಯಲ್ಲಿ ಹುಟ್ಟಿ ಭಾರತದ ರಾಜಕಾರಣದಲ್ಲಿ ಪ್ರಜ್ವಲಿಸಿ, ದೇಶದ ರಾಜಕೀಯ ಚರಿತ್ರೆಯ ದಿಕ್ಕನ್ನೇ ಬದಲಿಸಿದ್ದ ಕೇಸರಿ ಕಟ್ಟಾಳುವಿಗೆ ಸಂದಿತು ದೇಶದ ಅತ್ಯುನ್ನತ ಗೌರವ. ಎಲ್.ಕೆ ಅಡ್ವಾಣಿಯವರಿಗೆ ಬಹು ದೊಡ್ಡ ಗುರು ದೀಕ್ಷೆ ಕೊಟ್ಟರು ಶಿಷ್ಯೋತ್ತಮ ನರೇಂದ್ರ ಮೋದಿ. ಲಾಲ್ ಕೃಷ್ಣ ಅಡ್ವಾಣಿ.. ಹುಟ್ಟಿದ್ದು ಪಾಕಿಸ್ತಾನ ಕರಾಚಿಯಲ್ಲಿ. ಜ್ವಾಲೆಯಂತೆ ಪ್ರಜ್ವಲಿಸಿದ್ದು ಭಾರತದ ನೆಲದಲ್ಲಿ. ಬಿಜೆಪಿಗೆ ನೆಲೆಯೇ ಇಲ್ಲದ ನೆಲದಲ್ಲಿ ಕಮಲ ಬಾವುಟ ಹಾರಿಸಿ ಕೇಸರಿ ಕೋಟೆ ಕಟ್ಟಿದ್ದ ರಣವಿಕ್ರಮ ಎಲ್.ಕೆ ಅಡ್ವಾಣಿ(Lal Krishna Advani). ರಾಮಜನ್ಮಭೂಮಿ ಅಯೋಧ್ಯೆಯಲ್ಲಿಂದು ಭವ್ಯ ರಾಮಮಂದಿರ(Ram Mandir) ತಲೆ ಎತ್ತಿ ನಿಂತಿದೆ ಅಂದ್ರೆ ಅದ್ರ ನಿಜವಾದ ರೂವಾರಿ ಎಲ್.ಕೆ ಅಡ್ವಾಣಿ. ಭಾರತದ ರಾಜಕೀಯ ದಿಕ್ಕನ್ನೇ ಬದಲಿಸಿದ ರಾಜಕೀಯ ನೇತಾರನಿಗೆ ಭಾರತ ರತ್ನ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. 96 ವರ್ಷದ ವಯೋವೃದ್ಧ ಅಡ್ವಾಣಿಯವರ ಜೀವನದಲ್ಲಿದು ಅತ್ಯಂತ ಶ್ರೇಷ್ಠ ಕ್ಷಣ. ಭಾರತ ರತ್ನ ಪ್ರಶಸ್ತಿ ಘೋಷಣೆಯಾದ ಸುದ್ದಿಯನ್ನು ಪುತ್ರಿ ಪ್ರತಿಭಾ ಅಡ್ವಾಣಿ, ತಂದೆಯವರಿಗೆ ಹೇಳುತ್ತಿದ್ದಂತೆ ಬಿಜೆಪಿ ಭೀಷ್ಮಾಚಾರ್ಯ ಸಂಭ್ರಮ ಪಟ್ಟಿದ್ದಾರೆ.
ಇದನ್ನೂ ವೀಕ್ಷಿಸಿ: ರಥಯಾತ್ರೆ ಸಾರಥಿಯ ಧರ್ಮಜಾಗೃತಿ ಹೋರಾಟ..! ರಾಮನಿಗಾಗಿ ಅಡ್ವಾಣಿ ಎದುರಿಸಿದ ವಿಚಾರಣೆಗಳೆಷ್ಟು..?