Kargil Vijay Divas: Tololing & Tiger Hill ವಶಪಡಿಸಿಕೊಂಡಿದ್ದು ಹೇಗೆ?
ಕಾರ್ಗಿಲ್ ವಿಜಯ ಅಂದರೆ ಅದೇನೋ ರೋಮಾಂಚನ. ಹೊಸ ತಲೆಮಾರಿನ ಭಾರತದ ಪ್ರಜೆಗಳಿಗೆ ಕಾರ್ಗಿಲ್ ಯುದ್ಧದ ಜೊತೆಗಿನ ಭಾವುಕ ಸೆಳೆತ ಅಂಥದ್ದು. ಪ್ರತಿ ವರ್ಷದ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸ ಆಚರಣೆ ಮಾಡಲಾಗುತ್ತದೆ.
ಬೆಂಗಳೂರು (ಜು.25): ಪ್ರತಿ ವರ್ಷದ ಜುಲೈ 26 ರಂದು ಭಾರತೀಯರಿಗೆ ಸಂಭ್ರಮ. ಯಾಕೆಂದರೆ, ಅದು ಕಾರ್ಗಿಲ್ ವಿಜಯ ದಿವಸ. ನುಸುಳುಕೋರ ಪಾಕಿಸ್ತಾನಕ್ಕೆ ಅದರದೇ ಭಾಷೆಯಲ್ಲಿ ತಮ್ಮ ಸೈನಿಕರು ಉತ್ತರ ಕೊಟ್ಟ ದಿನ.
ಕಾರ್ಗಿಲ್ ಯುದ್ಧಭೂಮಿಯಲ್ಲಿ ಪರಮ ವೀರಚಕ್ರ ಯೋಗೇಂದ್ರ ಕುಮಾರ್ ಯಾದವ್ ಆ ದಿನಗಳನ್ನು ನೆನಪು ಮಾಡಿಕೊಂಡು ಹೆಮ್ಮೆಯಿಂದ ಮಾತನಾಡಿದ್ದಾರೆ. ಅದರೊಂದಿಗೆ ಪಾಕ್ ನುಸುಳುಕೋರರನ್ನು ಮೊದಲು ಪತ್ತೆ ಮಾಡಿದ್ದ ತಾಶಿ ನಾಮ್‌ಗ್ಯಾಲ್ (Tashi Namgyal) ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಶಾಲಾ ದಿನದಲ್ಲೇ ಸೇನೆಗೆ ಸೇರಲು ಉತ್ಸುಕನಾಗಿದ್ದ; ಕಾರ್ಗಿಲ್ ಹುತಾತ್ಮ ಯೋಧನ ಕುರಿತು ತಂದೆಯ ಮಾತು!
ಬ್ರಿಗೇಡಿಯರ್ ಕುಶಾಲ್ ಠಾಕೂರ್ ಭಾರತ ಟೋಲೋಲಿಂಗ್ ಹಾಗೂ ಟೈಗರ್ ಹಿಲ್‌ಅನ್ನು ವಶಪಡಿಸಿಕೊಂಡಿದ್ದು ಹೇಗೆ ಅನ್ನೋದನ್ನು ವಿವರಿಸಿದ್ದಾರೆ. ಕಾರ್ಗಿಲ್ ಯುದ್ಧ ಕವರ್ ಮಾಡಿದ್ದ ಪತ್ರಕರ್ತ ಗುಲಾಮ್ ನಬಿ ಜಿಯಾ ಕೂಡ ಮಾತನಾಡಿದ್ದಾರೆ.