Asianet Suvarna News Asianet Suvarna News

Heavy Rainfall In Uttarakhand : ಉತ್ತರಾಖಂಡ್‌ನಲ್ಲಿ ಭಾರೀ ಮಳೆ..ಮನೆಗಳು ಜಲಾವೃತ..ನದಿಯಂತಾದ ರಸ್ತೆಗಳು

ಉತ್ತರಾಖಂಡ್ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಬದ್ರಿನಾಥ್‌ನಲ್ಲಿ ಭಾರೀ ಗಾತ್ರದ ಬಂಡೆ ಕುಸಿತಗೊಂಡಿದೆ.
 

First Published Jul 9, 2024, 12:58 PM IST | Last Updated Jul 9, 2024, 12:58 PM IST

ದಿನದಿಂದ ದಿನಕ್ಕೆ ಮಳೆಯ ಅಬ್ಬರ ಜೋರಾಗುತ್ತಿದೆ. ದೇಶಾದ್ಯಂತ ವ್ಯಾಪಕವಾಗಿ ಮಳೆಯಾಗುತ್ತಿದ್ದು(Rain), ಅನೇಕ ರಾಜ್ಯಗಳಲ್ಲಿ ಪ್ರವಾಹದ(Flood) ಪರಿಸ್ಥಿತಿ ಉಂಟಾಗಿದೆ. ಈ ನಡುವೆ ಉತ್ತರಾಖಂಡ್(Uttarakhand) ರಾಜ್ಯದಲ್ಲಿ ಭಾರೀ ಅಬ್ಬರ ಮಳೆಯಾಗುತ್ತಿದೆ. ರಸ್ತೆಗಳು ನದಿಯಂತಾಗಿದ್ದು, ಮನೆಗಳು ಜಲಾವೃತವಾಗಿವೆ. ರಸ್ತೆ ದಾಟಲು ಜನ ಪರದಾಟ ನೆಡಸುತ್ತಿದ್ದಾರೆ. ಇನ್ನೂ ಬದ್ರಿನಾಥ್‌ನಲ್ಲಿ(Badrinath) ಭಾರೀ ಗಾತ್ರದ ಬಂಡೆ(Rock) ಕುಸಿತಗೊಂಡಿದೆ. ರಸ್ತೆಗೆ ಬೃಹತ್ ಗಾತ್ರದ ಬಂಡೆ ಕಲ್ಲುಗಳು ಉರುಳಿ ಬಿದ್ದಿವೆ. ಅಪಾಯ ಮಟ್ಟ ಮೀರಿ ನದಿಗಳು ಹರಿಯುತ್ತಿವೆ. ಒಟ್ಟಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. 

ಇದನ್ನೂ ವೀಕ್ಷಿಸಿ:  ರಾತ್ರಿ ಅವಧಿಗೂ ಮೀರಿ ಪಬ್ ತೆರೆದಿದ್ದ ಹಿನ್ನಲೆ: ಕೊಹ್ಲಿ ಮಾಲೀಕತ್ವದ ಪಬ್ ಮೇಲೆ ಎಫ್ಐಆರ್‌ ದಾಖಲು